ಕಿರಿಮಂಜೇಶ್ವರ ದೇವಳದಲ್ಲಿ ಕಳ್ಳತನ

ಕುಂದಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲೊಂದಾದ ಕಿರಿಮಂಜೇಶ್ವರದ ಅಗಸ್ತೇಶ್ವರ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು ಸುಮಾರು 20,000ರೂ ಮೌಲ್ಯದ ಸೊತ್ತುಗಳನ್ನು ದೋಚಿ ಪಾರಾರಿಯಾದ ಘಟನೆ ನಡೆದಿದೆ.

ಘಟನೆಯ ವಿವರ:
ಕಿರೀಮಂಜೇಶ್ವರ ಅಗಸ್ತೇಶ್ವರ ದೇವಸ್ಥಾನದ ಮೇಲ್ಛಾವಣಿಯಿಂದ ಕೆಳಕ್ಕಿಳಿದ ಕಳ್ಳರು ದೇವಸ್ಥಾನದ ಲಾಕರ್ ಮುರಿದು ಸುಮಾರು ಅರ್ಧ ಕೆ.ಜಿ ತೂಕದ ಬೆಳ್ಳಿಯ ಮುಖವಾಡ, ಎರಡು ಬೆಳ್ಳಿಯ ನೇತ್ರವನ್ನು ಅಪಹರಿಸಿದ್ದಾರೆನ್ನಲಾಗಿದೆ. ಲಾಕರ್ ಒಡೆದಿರುವುದು ಸೇರಿದಂತೆ ಸುಮಾರು 20,000 ಮೌಲ್ಯದ ಸೊತ್ತುಗಳು ಕಳವುಗೈಯಲಾಗಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಕೆಲಸಕ್ಕೆಂದು ಬಂದ ಮಹಿಳೆ ಇದನ್ನು ನೋಡಿ ಸಂಬಂಧಿಸಿದವರಿಗೆ ವಿಷಯ ಮುಟ್ಟಿಸಿದ್ದಾಳೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದು, ಅಪರಾಧಿಗಳಿಗಾಗಿ ಬಲೆ ಬೀಸಿದ್ದಾರೆ. 


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com