ಪ್ರಾಚೀನ ವಿಗ್ರಹ ಮಾರಾಟ ಜಾಲ ಪೊಲೀಸರ ಬಲೆಗೆ

ಕೊಲ್ಲೂರು: ಪ್ರಾಚೀನ ವಿಗ್ರಹಗಳ ಮಾರಾಟ ಜಾಲದ ಬೆನ್ನು ಹತ್ತಿದ ಮೈಸೂರು ಜಿಲ್ಲಾ ಸಿಸಿಬಿ ಪೊಲೀಸರು ಕೊಲ್ಲೂರಿನ ಮೂವರು ಯುವಕರನ್ನು ಬಂಧಿಧಿಸಿ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ದ ಘಟನೆ ನಡೆದಿದೆ.

ಕೊಲ್ಲೂರು ಪೊಲೀಸರಿಗೆ ಯಾವುದೇ ಪೂರ್ವ ಮಾಹಿತಿ ನೀಡದೇ ಪ್ರತ್ಯೇಕ 6 ವಾಹನಗಳಲ್ಲಿ ಕೊಲ್ಲೂರಿಗೆ ಆಗಮಿಸಿ ಶ್ರೀ ದೇವಳದ ವಸತಿ ಗೃಹದಲ್ಲಿ ತಂಗಿ ಸ್ಥಳೀಯ ನಿವಾಸಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಮೈಸೂರು ವಿಶೇಷ ಪೊಲೀಸ್‌ ತಂಡವು ಸಾಮಾನ್ಯ ಭಕ್ತರಂತೆ ನಟಿಸಿ ಸ್ಥಳೀಯ ನಿವಾಸಿಗಳಾದ ಸನತ್‌ ಹಾಗೂ ರವಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಒಯ್ದಿರುತ್ತಾರೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರಾಚೀನ ಬೆಲೆಬಾಳುವ ವಿಗ್ರಹ ಕಳ್ಳರ ಜಾಲದ ಇಬ್ಬರು ಆರೋಪಿಗಳನ್ನು ಬಂಧಿಧಿಸಿದಾಗ ಅವರು ನೀಡಿದ ಮಾಹಿತಿಯಂತೆ ಆ ತಂಡದಲ್ಲಿರುವ ಕೊಲ್ಲೂರು ನಿವಾಸಿಗಳನ್ನು ಪತ್ತೆ ಹಚ್ಚಿ ಬಂಧಿಧಿಸುವ ಸಲುವಾಗಿ ಸದ್ದುಗದ್ದಲವಿಲ್ಲದೇ ಪೊಲೀಸ್‌ ತಂಡವು ಕೊಲ್ಲೂರಿಗೆ ಆಗಮಿಸಿತ್ತು.

ಈ ತಂಡದಲ್ಲಿದ್ದ ಇನ್ನೋರ್ವ ಆರೋಪಿ ಕೃಷ್ಣಯ್ಯನ ಶೋಧ ಕಾರ್ಯ ಮುಂದುವರಿಸಿರುವ ತಂಡವು ಅಂತರಾಷ್ಟ್ರೀಯ ಮಟ್ಟದ ಪ್ರಾಚೀನ ಕಳ್ಳರ ರ್ಪೂ ಮಾಹಿತಿ ಪಡೆದಿದ್ದು ಇದರಲ್ಲಿರುವ ಇನ್ನಿತರ ಪ್ರತಿಷ್ಠಿತ ಕುಳಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಓರ್ವ ಆರೋಪಿ ಇಲ್ಲಿ ಜೀಪು ಚಾಲಕನಾಗಿದ್ದು ಇನ್ನೋರ್ವ ಆರೋಪಿ ಉದ್ಯೋಗದಲ್ಲಿರುವುದಾಗಿ ತಿಳಿದುಬಂದಿದೆ. ನಿಟ್ಟೂರಿನ ಮೂಲದ ಇಬ್ಬರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಧಿಸಿದಾಗ ಕೊಲ್ಲೂರಿನ ಆರೋಪಿಗಳನ್ನು ಪತ್ತೆ ಹಚ್ಚಲು ಅವರಿಗೆ ಅನುಕೂಲವಾಯಿತೆನ್ನಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com