ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಸೈಕೋ ಚಾಲಕ

ಬಾಲಕನನ್ನು ಅಪಹರಿಸಿ ಲೈಂಗಿಕ ಕಿರುಕುಳಕ್ಕೆ ಯತ್ನ: ಆರೋಪಿಯ ಬಂಧನ
ಬೈಂದೂರು: ಮನೆ ತೆರಳಲು ಡ್ರಾಫ್ ಕೇಳಿದ ಬಾಲಕನನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಅನುಚಿತವಾಗಿ ವರ್ತಿಸಿ ಪರಾರಿಯಾಗಿ,  ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬೈಂದೂರು ಸಮೀಪದ ಕಂಬದಕೋಣೆ  ಎಂಬಲ್ಲಿ ನಡೆದಿದೆ. ಉಡುಪಿ ಮೂಲದ ಕಾರು ಚಾಲಕ ಖರೀಮ್ ಅಬ್ರಹಾರ್ (30) ಬಂಧಿತ ಆರೋಪಿ

ಘಟನೆಯ ವಿವರ:
ಕಂಬದಕೋಣೆ ಸರಕಾರಿ ಫ್ರೌಡಶಾಲೆಯ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವ ಸಂಜೆ ವೇಳೆಗೆ ಶಾಲೆ ಮುಗಿಸಿಕೊಂಡು ಹೆರಂಜಾಲು ಕ್ರಾಸ್ ಹೆಗ್ಗೆರಿಯ ತನ್ನ ಮನೆಗೆ ತೆರಳುತ್ತಿದ್ದ ವೇಳೆಗೆ   ಕಂಬದಕೋಣೆಯ ರೈಲ್ವೆ ಗೇಟ್ ಸಮೀಪ ಬಂದ ಇಕೋ ಕಾರನ್ನು ನಿಲ್ಲಿಸಿ ಡ್ರಾಪ್ ನೀಡುವಂತೆ ಕೇಳಿದ್ದಾನೆ. ಒಬ್ಬನೇ ಹುಡುಗನಿರುವುದನ್ನು ಕಂಡು ಕಾರು ಚಾಲನೆ ಮಾಡುತ್ತಿದ್ದ ಖರಿಮ್ ಆತನನ್ನು ಮುಂದಿನ  ಸೀಟಿನಲ್ಲಿಯೇ ಕುಳ್ಳಿರಿಸಿಕೊಂಡು ತೆರಳಿದ್ದಾನೆ. (ಕುಂದಾಪ್ರ ಡಾಟ್ ಕಾಂ ವರದಿ) ಮಾರ್ಗ ಮಧ್ಯೆ ವಿದ್ಯಾರ್ಥಿಯ ಕಾಲಿನ ಮೇಲೆ ಕೈಯಿಟ್ಟು ಅಸಭ್ಯವಾಗಿ ನಡೆದುಕೊಂಡಿದ್ದಾನೆ . ಒಮ್ಮೆಲೇ ಈತನ ವಿಚಿತ್ರ ವರ್ತನೆಯನ್ನು ಕಂಡು ಆ ಬಾಲಕನೂ  ಹೆದರಿ ಕುಳಿತಿದ್ದ. ಸ್ವಲ್ಪ ಮುಂದೆ ಕಾರು ನಿಲ್ಲಿಸಿದ ಬಳಿಕ ಹುಡುಗನ ಪ್ಯಾಂಟ್ ಕಳಚುವಂತೆ ಗದರಿಸಿ, ಅನುಚಿತವಾಗಿ ವರ್ತಿಸಲು ಶುರುವಿಟ್ಟುಕೊಂಡಿದ್ದಾನೆ. ಇದರಿಂದ ಕಂಗಾಲಾದ ಯುವಕ ಒಮ್ಮೆಲೆ ಚಿರುಚಿಕೊಳ್ಳಲು  ಆರಂಭಿಸಿದಾಗ ತನಗೆ ತೊಂದರೆಯಾಗಬಹುದೆಂದು ತಿಳಿದ ಚಾಲಕ ಕಾಡು ಹಾದಿಯೆಂದು ತಿಳಿದು ಹುಡುಗನ ಮನೆಯ ಹಾದಿಯತ್ತ ಕಾರು ತಿರುಗಿಸಿದ್ದಾನೆ. (ಕುಂದಾಪ್ರ ಡಾಟ್ ಕಾಂ ವರದಿ) ಹುಡುಗ ಕೂಗುತ್ತಿರುವುದನ್ನು  ಕೇಳಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಒಬ್ಬರು ಏನಾತೆಂದು ಬಂದು ಕೇಳುವಷ್ಟರಲ್ಲಿ ಹುಡುಗನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಹುಡುಗ ನಡೆದ ಘಟನೆಯನ್ನು ವಿವರಿಸಿದ್ದಾನೆ. ಇತ್ತ ಕಾರು ಚಾಲಕ ಹುಡುನನಲ್ಲಿ  ಕರೆದುಕೊಂಡು ಬಂದ ಹಾದಿಯಲ್ಲಿ ಹಿಂತಿರುಗದೇ, ತಪ್ಪಿ ಬೇರೊಂದು ಮಾರ್ಗದಲ್ಲಿ ತೆರಳಿದ್ದಾನೆ. ಆದರೆ ಮುಖ್ಯ ರಸ್ತೆ ಸಿಗದಿರುವುದರಿಂದ ಸಂಶಯಗೊಂಡು ಸ್ಥಳಿಯರೋರ್ವರ ಬಳಿ ವಿಚಾರಿಸಿ ಮತ್ತೆ ಬಂದ  ಮಾರ್ಗದಲ್ಲಿ ಹಿಂತಿರುಗಿದ್ದಾನೆ. (ಕುಂದಾಪ್ರ ಡಾಟ್ ಕಾಂ ವರದಿ)

ದಾರಿ ತಪ್ಪಿಹೋಗಿ ಸಿಕ್ಕಿ ಬಿದ್ದ
ನಡೆದ ಘಟನೆಯನ್ನು ತಿಳಿದ ಸ್ಥಳೀಯರು ಕಾರು ಇದೇ ಮಾರ್ಗದಲ್ಲಿ ಬರುತ್ತದೆಂದು ಕಾದು ಕುಳಿತಿದ್ದರು. ಕಾರು ಹತ್ತಿರ ಬರುತ್ತಿದ್ದಂತೆಯೇ ಎಲ್ಲರೂ ಕೈ ಅಡ್ಡ ಹಾಕಿದ್ದಾರೆ.  ಆದರೆ ಒಳಗಿನಿಂಲೇ ಆತ ಕಾರು  ನಿಲ್ಲಿಸುವುದಿಲ್ಲ ಎಂದು ಸನ್ನೆ ಮಾಡುತ್ತಿದ್ದ. ಕೂಡಲೇ ಸ್ಥಳೀಯರೋರ್ವರು ಕಾರಿನ ಗಾಜು ಒಡೆಯುವುದಾಗಿ ಕಲ್ಲು ಹಿಡಿದುಕೊಂಡಾಗ ಕಾರು ಸ್ಲೋ ಮಾಡಿ ಹತ್ತಿರ ಬರುತ್ತಿದ್ದಂತೆಯೇ ಕಾರನ್ನು ಒಮ್ಮೆಲೇ ಮುಂದೆ  ಚಲಾಯಿಸಿಕೊಂಡು ಹೋಗಿದ್ದಾನೆ. ಕೈಯಲ್ಲಿ ಹಿಡಿದಿದ್ದ ಕಲ್ಲನ್ನು ಕಾರಿನ ಗಾಜಿನ ಮೇಲೆ ಎಸೆದು ದೂರ ಸರಿದಿದ್ದಾರೆ. ಆಗಲೂ ಕಾರು ನಿಲ್ಲಿಸದಿದ್ದಾಗ,  ಕೂಡಲೇ ಅಲ್ಲಿನವರು ಕಂಬದಕೋಣೆ ಕ್ರಾಸ್ ನಲ್ಲಿರುವ ಸುರೇಂದ್ರ ಎಂಬುವವರಿಗೆ ಕರೆ ಮಾಡಿ ಕಾರನ್ನು ನಿಲ್ಲಿಸಿಕೊಳ್ಳುವಂತೆ ಹೇಳಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಕಾರನ್ನು ಅಡ್ಡ ಹಾಕಲು ಬೈಕಿನಲ್ಲಿ  ಕಂಬದಕೋಣೆಯ ಸುರೇಂದ್ರ ಮತ್ತು ಗಣೇಶ್ ಎಂಬುವವರು ಕಾದು ಕುಳಿತಿದ್ದರು. ಕಾರು ಹತ್ತಿರ ಬರುತ್ತಿದ್ದಂತೆಯೇ ರಸ್ತೆಯ ಮಧ್ಯ ಬೈಕ್ ನಿಲ್ಲಿಸಿಕೊಂಡಿದ್ದಾರೆ. ಆದರೆ ವೇಗವಾಗಿ ಬಂದ ಕಾರು ಬೈಕ್ ಹತ್ತಿರ  ಬರುತ್ತಿದ್ದಂತೆಯೇ ಅಲ್ಲಿಂದ ಒಮ್ಮೆಲೇ ಬಲ ಬದಿಗೆ ತಿರುಗಿಸಿ ಮತ್ತೆ ಕುಂದಾಪುರದ ಕಡೆಗೆ ತೆರಳಿದೆ. ಕೂಡಲೇ ಸುರೇಂದ್ರ ಎಂಬುವವರು ಕಾರನ್ನು ಬೆನ್ನಟ್ಟಿದರಾದರೂ ಅತಿ ವೇಗದಲ್ಲಿದ್ದ ಕಾರು ಎತ್ತ ಸಾಗಿತು ಎಂದು  ತಿಳಿಯಲಿಲ್ಲ. ಆದರೂ ನಾವುಂದ ಮಸ್ಕಿಯ ಕೆಲವೆಡೆ ಹುಡುಕಾಟ ನಡೆಸಿದಾಗ ಕಾರು ಮಸ್ಕಿಯ ಸಮುದ್ರ ತೀರದ ಬಳಿ ಪತ್ತೆಯಾಯಿತಾದರೂ ಚಾಲಕ ಅಲ್ಲಿಂದ ಪರಾರಿಯಾದದ್ದು ತಿಳಿದು ಬಂದಿತ್ತು. (ಕುಂದಾಪ್ರ ಡಾಟ್ ಕಾಂ ವರದಿ)

ವಿಷಯ ತಿಳಿದ ಪೊಲೀಸರು ಆತನನ್ನು ಹುಡುಕಲು ಹೊರಟಿದ್ದರು. ಕಾರನ್ನು ಅಲ್ಲಿಯೇ  ಬಿಟ್ಟು ನಡೆದುಕೊಂಡು ಬಂದು ಖರೀಮ್ ಕರಾವಳಿ ರಸ್ತೆಯ ಸಮೀಪದ ಗೂಡಂಗಡಿ ಬಳಿ ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದಾಗ ಬೈಂದೂರು ವೃತ್ತ ನಿರೀಕ್ಷಕರಾದ ಎಮ್. ಸುದರ್ಶನ್, ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಮತ್ತು ಸಿಬ್ಬಂದಿಗಳು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಉಡುಪಿ ಮೂಲದವನಾದ ಖರೀಮ್ ಬೈಂದೂರಿನ ಸಂಬಂಧಿಯೋರ್ವರ ಮನೆಗೆ ಬಂದಿದ್ದ ಎನ್ನಲಾಗಿದೆ. ಸೈಕೋವಿನಂತೆ ವರ್ತಿಸುದ್ದ ಆತ ನಿನ್ನ ಸುಖಾಸುಮ್ಮೆನೆ ಅಡ್ಡಾಡುತ್ತಿದ್ದ ಎಂದು ತಿಳಿದುಬಂದಿದೆ. (ಕುಂದಾಪ್ರ ಡಾಟ್ ಕಾಂ ವರದಿ) ಪೊಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com