ಬೈಂದೂರು: ಅಪರಿಚಿತ ಲಾರಿ ಢಿಕ್ಕಿ-ಬೈಕ್ ಸವಾರನ ಸಾವು

ಕುಂದಾಪುರ: ತಾಲೂಕಿನ ಉಪ್ಪುಂದಂದಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಬೈಕಿಗೆ ಹಿಂಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮೃತಪಟ್ಟ ಘಟನೆ ಇಂದು ಬೈಂದೂರಿನಲ್ಲಿ ನಡೆದಿದೆ.  ರೇಮಂಡ್ ನಜ್ರತ್ ಮೃತ ದುರ್ದೈವಿ.

ಘಟನೆಯ ವಿವರ:
ರೇಮಂಡ್ ನಜ್ರತ್ ಉಪ್ಪುಂದದ ತನ್ನ ಮನೆಯಿಂದ ಬೈಂದೂರಿನ ನಿತ್ಯಾನಂದ ನಗರಕ್ಕೆ ಕೆಲಸದ ನಿಮಿತ್ತ ತನ್ನ ಬೈಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ ಸಾಗುತ್ತಿದ್ದ ವೇಳೆಗೆ ಹಿಂಬದಿಯಿಂದ ಬಂದ ಅಪರಿಚಿತ ಲಾರಿಯೊಂದು ಬೈಂದೂರಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಎದುರು ಬೆಳಿಗ್ಗೆ 3:30ರ ವೇಳೆಗೆ ಬೈಕಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ರೇಮಂಡ್ ನಜ್ರತ್ ರಸ್ತೆಗೆ ಬಿದ್ದುದರಿಂದ ಅವರ ತಲೆಗೆ ತೀವ್ರ ಗಾಯಗಳಾಗಿತ್ತು. ಆಪಘಾತವಾದ ಬಳಿಕ ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಗ್ಗಿನ ಸಮಯವಾದ್ದರಿಂದ ಆ ಮಾರ್ಗದಲ್ಲಿ ಯಾರೂ ಕೂಡ ಸಂಚರಿಸುತ್ತಿರಲಿಲ್ಲವಾದ್ದರಿಂದ ಬಹಳ ಹೊತ್ತಿನ ತನಕ ಅವರು ರಸ್ತೆಯ ಬದಿಗೆ ಬಿದ್ದಿದ್ದರೆಲ್ಲನಾಗಿದೆ. ತಡವಾಗಿ ಬಂದ ದಾರಿಹೋಕರೊಬ್ಬರು ಅಂಬುಲೆನ್ಸಿನಲ್ಲಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ, ಸಾಗಿಸುವ ವೇಳೆ ನಜ್ರತ್ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com