ಗೋವಿಗೆ ಎಸಿಡ್ ಎರಚಿದ ದುಷ್ಕರ್ಮಿಗಳು

ಕುಂದಾಪುರ: ಕೋಟೇಶ್ವರ ಸಮೀಪದ ರಾಜರಾಮ್ ಪಾಲಿಮರ್ಸ್ ನಲ್ಲಿ ಸಾಕಲಾಗುತ್ತಿರುವ ಗೋವು ಒಂದಕ್ಕೆ ಕಿಡಿಗೇಡಿಗಳು ಎಸಿಡ್‌ನ್ನು ಎರಚಿ ಪೈಶಾಚಿಕವಾಗಿ ವರ್ತಿಸಿದ ಘಟನೆ ನಡೆದಿದೆ. ಎಂದಿನಂತೆ ಫ್ಯಾಕ್ಟರಿಯಿಂದ ಮೇವಿಗಾಗಿ ಬಯಲಿಗೆ ದನಗಳು ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು ಬಯಲಿನಲ್ಲಿ ಮೆಂದು ವಾಪಾಸಾಗಬೇಕಿದ್ದ ಗೋವು ನಾಲ್ಕೈದು ದಿನ ಕಳೆದರೂ ಬಾರದೇ ಇರುವುದು ಮಾಲಕರಲ್ಲಿ ಆತಂಕ ಮೂಡಿತ್ತು. 5 ದಿನಗಳ ಬಳಿಕ ವಾಪಾಸ್ಸಾದ  ಗೋವು ನಿಶಕ್ತಿಯಿಂದ ಬಳಲುತ್ತಿದ್ದು ಮೈಯೆಲ್ಲ ಎಸಿಡ್‌ನಿಂದ ಸುಟ್ಟು ಹೋಗಿರುವ ದೃಶ್ಯ ಹೃದಯ ಕಲಕುವಂತಿತ್ತು. ತಕ್ಷಣವೇ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದ್ದು ಇಂತಹ ಅಮಾನವೀಯ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪೋಲಿಸರಿಗೆ ದೂರು ನೀಡುವ ಬಗ್ಗೆ ಮಾಲಕರು ಆಸಕ್ತಿ ವಹಿಸಿದ್ದಾರೆ.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com