ಯುವಜೋಡಿಗಳು ಆತ್ಮಹತ್ಯೆಗೆ ಶರಣು

ಕೋಟ: ಅಪ್ರಾಪ್ತ ವಯಸ್ಸಿನ ತನ್ನ ಸ್ನೇಹಿತೆ ಜತೆಗೆ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸಾಬ್ರಕಟ್ಟೆ ಸಮೀಪ ಕಾಜ್ರಲ್ಲಿಯಲ್ಲಿ ನಡೆದಿದೆ. ಕಾಜ್ರಲ್ಲಿ ನಿವಾಸಿ ದಿವಾಕರ ನಾಯ್ಕ (27) ಹಾಗೂ ಬಾರಾಳಿ ನಿವಾಸಿ ಚೈತ್ರ (16) ಮದುವೆಗೆ ಮನೆಯವರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯಗೆ ಶರಣಾಗಿದ್ದಾರೆ.

ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿದ್ದ ದಿವಾಕರ ಚೈತ್ರಾಳ ಮನೆ ಸಮೀಪವೆ ತನ್ನ ರಿಕ್ಷಾ ನಿಲ್ದಾಣ ಹೊಂದಿದ್ದ. ಮೂರು ವರ್ಷದ ಹಿಂದೆ ಈಕೆ ಸಮೀಪದ ಹೈಸ್ಕೂಲ್‌ಗೆ ತೆರಳುವ ಸಂದರ್ಭದಿಂದ ಇವರು ಪ್ರೀತಿಸುತ್ತಿದ್ದು, ಯುವತಿ ಅಪ್ರಾಪೆ ಹಾಗೂ ಅಂತರ್‌ಜಾತಿಯಾದ ಕಾರಣ ಇಬ್ಬರ ಮನೆಯವರು ಮಧುವೆಗೆ ನಿರಾಕರಿಸಿದ್ದರು ಎನ್ನಲಾಗಿದೆ. ಇದೇ ಭಯದಿಂದ ಜೋಡಿಗಳು ನೇಣಿಗೆ ಶರಣಾಗಿದ್ದಾರೆ ಎಂದು ಸಂಶಯಿಸಲಾಗಿದೆ.

ಮೃತ ಯುವತಿ ಪ್ರಸ್ತುತ ತನ್ನ ಚಿಕ್ಕಮ್ಮನ ಮನೆ ಆರ್ಡಿ, ಅಲ್ಬಾಡಿಯಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದು ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಅನಂತರ ಮನೆಯವರು ಈ ಕುರಿತು ಪ್ರಕರಣ ದಾಖಲಿಸಿ ಶೋಧ ನಡೆಸಿದಾಗ ದಿವಾಕರನ ಜತೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

 ಶುಕ್ರವಾರ ಮಧ್ಯಾಹ್ನ 4.30ರ ಸುಮಾರಿಗೆ ದಿವಾಕರ ತನ್ನ ಮನೆ ಸಮೀಪ ಓಮ್ನಿಯಲ್ಲಿ ಓದಾಡುತ್ತಿರುವುದನ್ನು ಸ್ನೇಹಿತರು ಗುರುತಿಸಿದ್ದು, ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದಾರೆ. ಅನಂತರ ಆತನಿಗಾಗಿ ಹುಡುಕಾಟ ನಡೆಸುವಾಗ ಕಾಜ್ರಲ್ಲಿ ಸಮೀಪ ಹಾಡಿಯಲ್ಲಿ ಈತನ ಓಮ್ನಿ ಪತ್ತೆಯಾಗಿದೆ. ಅನಂತರ ವ್ಯಾಪಕ ಶೋಧ ನಡೆಸಿದಾಗ ಇಲ್ಲಿನ ಅಂಡಾರು ಮರಕ್ಕೆ ಒಂದೇ ಹಗ್ಗದಲ್ಲಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೃತ ಯುವಕನ ಕುರಿತು ಸ್ಥಳೀಯರಲ್ಲಿ ಉತ್ತಮ ಅಭಿಪ್ರಾಯವಿದ್ದು, ಸ್ವಂತಃ ರಿಕ್ಷಾ ಹಾಗೂ ಓಮ್ನಿ ಹೊಂದಿದ್ದ . ಈತನ ಹೆತ್ತವರು ಉತ್ತಮ ಪ್ರಗತಿಪರ ಕೃಷಿಕರಾಗಿದ್ದಾರೆ. ಚೈತ್ರಾಳ ತಂದೆ ಹಲವು ವರ್ಷದ ಹಿಂದೆ ಮೃತಪಟ್ಟಿದ್ದರು.

ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com