ಇಂಟರ್ನೆಟ್‌ ಬ್ಯಾಂಕಿಂಗ್‌: 40.84 ಲ.ರೂ. ವಂಚನೆ

ಉಡುಪಿ: ವಿದೇಶದಲ್ಲಿರುವ ಮಹಿಳೆಯೊಬ್ಬರ ಐಸಿಐಸಿಐ ಬ್ಯಾಂಕಿನ ಮಣಿಪಾಲ ಶಾಖೆಯಲ್ಲಿದ್ದ ಖಾತೆಯಿಂದ ಅಂತರ್ಜಾಲ ತಂತ್ರಜ್ಞಾನದ ಮೂಲಕ ದುಷ್ಕರ್ಮಿಗಳು ಹಂತ-ಹಂತವಾಗಿ 40,84,200 ನಗದೀಕರಿಸಿಕೊಂಡು ವಂಚನೆ ನಡೆಸಿದ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಬುದಾಬಿಯ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನಲ್ಲಿರುವ ಆರತಿ ಪೂಜಾರಿ ದೂರು ನೀಡಿದವರು. ತಾನು ಐಸಿಐಸಿಐ ಬ್ಯಾಂಕಿನ ಮಣಿಪಾಲ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, 2015ರ ಎ. 3ರಿಂದ 21ರ ವರೆಗೆ ಯಾರೋ ದುಷ್ಕರ್ಮಿಗಳು ಇಂಟರ್‌ನೆಟ್‌ ಬ್ಯಾಂಕಿಂಗ್‌ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು 40 ಲ.ರೂ.ಗೂ ಅಧಿಕ ಹಣವನ್ನು ನಗದೀಕರಣ ಮತ್ತು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com