ಕುಂದಾಪುರ: ಹಿರಿಯ ಕಾಂಗ್ರೇಸ್ ಮುಖಂಡ ಹಾಗೂ ಪುರಸಭೆಯ ಮಾಜಿ ಸದಸ್ಯ ರತ್ನಾಕರ ಶೇರುಗಾರ್ (66) ಸಂಜೆ ಚರ್ಚ್ ರಸ್ತೆಯಲ್ಲಿ ತಮ್ಮನ ಮನೆಯ ಕಾಂಕ್ರಿಟ್ ಛಾವಣಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಮನೆಯ ಆರ್.ಸಿ.ಸಿ ಛಾವಣಿಯಲ್ಲಿ ನೀರು ತುಂಬಿರುವುದನ್ನು ತೆರವುಗೊಳಿಸುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಮೃತರು ಕುಂದಾಪುರ ವಿ.ಎಸ್.ಎಸ್. (ನಿ) ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಇವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.