ಗಾಳಿ ಮಳೆ: ಅಲ್ಲಿಲ್ಲ ಅಪಾರ ಹಾನಿ

ಬೈಂದೂರು: ಇಲ್ಲಿನ ಸಂತೆ ಮಾರ್ಕೆಟ್ ಆವರಣದಲ್ಲಿರುವ ಹಳೆಯ ಅರಳಿಮರವೊಂದು ಬೆಳಿಗ್ಗೆ ನೆಲಕ್ಕುರುಳಿದ್ದು, ಮರದ ಕೆಳಗಿದ್ದ ಅಂಗಡಿ ಹಾಗೂ ವಾಹನಗಳಿಗೆ ಹಾನಿ ಸಂಭವಿಸಿದೆ.
      ಸುಮಾರು 300 ವರ್ಷಗಳು ಹಿಂದಿನ ಅರಳಿ ಮರವು ಗಾಳಿಯ ನೆಲಕ್ಕುರುಳಿದ್ದು ಕೆಳಗೆ ನಿಲ್ಲಿನಿದ್ದ ಚಂದ್ರ, ಸೀತಾರಾಮ ಶೆಟ್ಟಿ, ಆನಂದ ಎಂಬುವವರ ಬೈಕ್ ಹಾಗೂ ಸಬೀರ್ ಎಂಬುವವರ ಕೋಳಿ ಅಂಗಡಿ, ನಾಗ ದೇವಾಡಿಗರ ತರಕಾರಿ ಅಂಗಡಿ ಹಾಗೂ ಇನ್ನೊರ್ವರಿಗೆ ಸೇರಿದ ಕುರಿ ಅಂಗಡಿಗೂ ಹಾನಿಯಾನಿದೆ. 
     ಮರದ ಕೆಳಗೆ ನಿಂತಿದ್ದ ಆನಂದ ಹಾಗೂ ಸೂರ ಶೆಟ್ಟಿ ಎಂಬುವವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಸೂಮಾರು 1.50ಲಕ್ಷ ರೂ. ಹಾನಿ ಸಂಭವಿಸಿರಬುದೆಂದು ಅಂದಾಜಿಸಲಾಗಿದೆ.
      ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟವೊಂದರ ಮೇಲ್ಚಾವಣಿಯು ರಾತ್ರಿ ಬೀಸಿದ ಗಾಳಿಗೆ ಹಾರಿ ಹೋಗಿ ಹಿಂದಿನ ಮನೆಯ ಗೋಡೆಗೆ ಅಪ್ಪಳಿಸಿದೆ. ಅಪ್ಪಳಿಸಿದ ರಭಸಕ್ಕೆ ಮನೆಗೆ ಅಲ್ಪಸ್ವಲ್ಪ ಹಾನಿ ಸಂಭವಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com