ಬೈಕ್ ಸ್ಟಿಡ್: ರಸ್ತೆಗುರುಳಿದ ಸವಾರನ ಸಾವು

ಕೊಲ್ಲೂರು: ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಮರಳುತ್ತಿರುವ ವೇಳೆ ಬೈಕ್ ಸ್ಟಿಡ್ ಆದ ಪರಿಣಾಮ ಬೈಕ್ ಸವಾರ ಸಂತೋಷ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಮುದೂರು ಎಂಬಲ್ಲಿ ನಡೆದಿದೆ. ಮುದೂರು ನಿವಾಸಿ ಸಂತೋಷ್ ಪೂಜಾರಿ(29) ಮೃತ ದುರ್ದೈವಿ.

ಮುದೂರು ನಿವಾಸಿಯಾಗಿರುವ ಗೋಪಾಲ ಪೂಜಾರಿ ಅವರ ಪುತ್ರ ಕೂಲಿ ಕೆಲಸ ಮಾಡಿಕೊಂಡಿದ್ದು ಮಧ್ಯಾಹ್ನದ ವೇಳೆ ಊಟಕ್ಕಾಗಿ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಗೋಪಾಲ ಪೂಜಾರಿಯವರ 5 ಜನ ಮಕ್ಕಳಲ್ಲಿ ಸಂತೋಷ್ ನಾಲ್ಕನೆಯವರು. ಇವರಿಗೆ ಮೂವರ ಸಹೋದರಿ, ಹಾಗೂ  ಒಬ್ಬ ಸಹೋದರನಿದ್ದ ಎಂದು ತಿಳಿದುಬಂದಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com