ಕುಂದಾಪುರ: ಸಂಜೆಯ ವೇಳೆಗೆ ಸಂತೆಯಲ್ಲಿ ಸಾಮಾನು ಖರೀದಿಸಿ ಹಟ್ಟಿಯಂಗಡಿಯ ತನ್ನ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಹೇರಿಕುದ್ರು ಸೇತುವೆಯ ಬಳಿ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ, ಸಹಸವಾರನಿಗೆ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಸಾವನ್ನಪ್ಪಿದ ಬೈಕ್ ಸವಾರ ಹಟ್ಟಿಯಂಗಡಿ ಸಮೀಪದ ಕರ್ಕಿ ನಿವಾಸಿ ಕರಿಯಪ್ಪ ಪೂಜಾರಿ(44) ಹಾಗೂ ಗಾಯಗೊಂಡಿರುವ ಸಹ ಸವಾರ ಹಟ್ಟಿಯಂಗಡಿ ಅಭಿಷೇಕ್(26) ಎಂದು ತಿಳಿದುಬಂದಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗುರುಳಿದ ಬೈಕ್ ಸವಾರ ಕರಿಯಪ್ಪ ತೀವ್ರ ರಕ್ತಸ್ರಾವದಿಂದ ಅಲ್ಲಿಯೇ ಮೃತಪಟ್ಟಿದ್ದಾರೆ. ಹಿಂಬದಿಯ ಸವಾರ ಅಭಿಷೇಕ್ ಗೆ ಗಂಭೀರವಾಗಿ ಗಾಯಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.