ಮೀನು ಹಿಡಿಯಲು ತೆರಳಿದ ವ್ಯಕ್ತಿ ನೀರುಪಾಲು

ಕುಂದಾಪುರ : ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಿದ್ಕಲ್‌ಕಟ್ಟೆ ಸಮೀಪದಲ್ಲಿರುವ ಹುಲಿಕಲ್‌ ಕೆರೆಗೆ ಮೀನು ಹಿಡಿಯಲು ತೆರಳಿದ ಸ್ಥಳೀಯ ನಿವಾಸಿ ಗೋಪಾಲ ಕುಲಾಲ್‌ (50) ಅವರು ಕೆರೆಯಲ್ಲಿ ಕೆಸರಿನಲ್ಲಿ ಹೂತು, ಮುಳುಗಿ ಮೃತಪಟ್ಟಿದ್ದು, ಮೃತ ದೇಹ ಕೆರೆಯಲ್ಲಿ ಕೆಸರಿನಲ್ಲಿ ಮುಳುಗಿದ ಪರಿಣಾಮ ಶವದ ಶೋಧ ಕಾರ್ಯ ನಡೆದಿದೆ.

ಪ್ರಸ್ತುತ ವಾರಾಹಿ ಚಾನೆಲ್‌ನಲ್ಲಿ ನೀರು ಹರಿಯುತ್ತಿದ್ದು, ಇದರ ಒಳಹರಿವಿನಿಂದಾಗಿ ಇಲ್ಲಿನ ಈ ಕೆರೆ ಜಲಾವೃತಗೊಂಡಿದ್ದು, ನೀರಿನ ಸೆಳೆ ಕಂಡ ಗೋಪಾಲ್‌ ಅವರು ಮೀನು ಹಿಡಿಯುವರೇ ಕೆರೆಗೆ ಇಳಿದಿದ್ದರು.

ಆದರೆ ಆ ಕೆರೆಯಲ್ಲಿ ಕೆಸರು ತುಂಬಿರುವುದರಿಂದ ಅಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಕೆಸರಿನಲ್ಲಿ ಹೂತು ಹೋಗಿ ಮೃತಪಟ್ಟಿದ್ದಾರೆ. ಇವರು ಮುಳುಗುವುದನ್ನು ನೋಡಿದ ಸ್ಥಳೀಯರು ಬೊಬ್ಬೆ ಇಡುವ ಮೊದಲೇ ಮುಳುಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಕುಂದಾಪುರದ ಅಗ್ನಿಶಾಮಕದಳ ಆಗಮಿಸಿ ಮುಳುಗಿರುವ ಮೃತದೇಹವನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದೆ. ಸ್ಥಳೀಯರು ಈ ಕಾರ್ಯಕ್ಕೆ ಸಹಕರಿಸಿದ್ದಾರೆ. ಕೆರೆಯ ನೀರು ತಗ್ಗು ಪ್ರದೇಶಕ್ಕೆ ಹರಿದುಹೋಗುವಂತೆ ಜೆಸಿಬಿಯಿಂದ ಕೆರೆ ಬದಿಯ ಮಣ್ಣನ್ನು ತೆಗೆಯಲಾಗಿದೆ.

ಮೃತ ಗೋಪಾಲ ಅವರು ಬಿದ್ಕಲ್‌ಕಟ್ಟೆಯ ಹೋಟೇಲ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಧ್ಯಾಹ್ನದ ಹೊತ್ತು ಮೀನು ಹಡಿಯಲು ತೆರಳಿದ್ದ ಎನ್ನಲಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಅಡುಗೆ ಕೆಲಸವನ್ನು ಮಾಡಿಕೊಂಡಿದ್ದ ಆತ ವಿವಾಹಿತಬಾಗಿದ್ದು, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com