ಜನ್ನಾಡಿ: ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಕೋಟ: ಇಲ್ಲಿನ ಠಾಣಾ ವ್ಯಾಪ್ತಿಯ ಜನ್ನಾಡಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ವರದಿಯಾದ್ದು, ಮಹಿಳೆಯ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇಂದಿರಾ(33) ಎಂಬುವವರು ಮೃತ ದುರ್ದೈವಿ.

ಘಟನೆಯ ವಿವರ:
ಜನ್ನಾಡಿ ಗ್ರಾಮದ ಮಲಾಡಿಯಲ್ಲಿ ಪತಿ ದೇವೇಂದ್ರ ಶೆಟ್ಟಿ ಅವರೊಂದಿಗೆ ವಾಸವಿದ್ದ ಇಂದಿರಾಗೆ ಆರು ವರ್ಷ ಪ್ರಾಯದ ಮಗನಿದ್ದಾನೆ. ಬೆಳಿಗ್ಗೆ ಸುಮಾರು 6ಗಂಟೆಯ ವೇಳೆಗೆ ಮನೆಯ ಸಮೀಪದ ತೆರೆದ ಬಾವಿಯಲ್ಲಿ ಹೆಂಡತಿಯ ಮೃತದೇಹವನ್ನು ಕಂಡು ಹೆದರಿದ ದೇವೇಂದ್ರ ತನ್ನ ಸಂಬಂಧಿಗಳಿಗೆ ವಿಷಯ ತಿಳಿಸಿದ್ದಾನೆ. ಸ್ಥಳಿಯರು ಇದು ವ್ಯವಸ್ಥಿತ ಕೃತ್ಯವೆಂದು ಅರಿತು ಕೋಟ ಪೊಲೀಸರಿಗೂ ವಿಷಯ ಮುಟ್ಟಿಸಿದ್ದು ಘಟನಾ ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್‌ ಇನ್ಸ್‌ಪೆಕ್ಟರ್‌ ಅರುಣ್‌ ನಾಯಕ್‌, ಕೋಟ ಠಾಣಾ ಎಸ್‌.ಐ. ಕಮಲಾಕರ ನಾಯ್ಕ ಮೊದಲಾದವರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ದೇವೇಂದ್ರನ್ನನು ಪೊಲೀಸ್ ವಿಚಾರಣೆಗಾಗಿ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಅನುಮಾನ ವ್ಯಕ್ತವಾದ ನಿನ್ನೆಲೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ್ ಆಸ್ವತ್ರೆಗೆ ರವಾನಿಸಲಾಗಿದೆ.

ಇಂದಿರಾ ಕೆಲವು ದಿನಗಳಿಂದ ಕಾರ್ಯಕ್ರಮವಿದ್ದುದರಿಂದ ಪ್ರಯುಕ್ತ ತನ್ನ ತಾಯಿಯ ಮನೆಯಲ್ಲಿಯೇ ಇದ್ದರು. ಎರಡು ದಿನಗಳ ಹಿಂದಷ್ಟೇ ಪತಿಯ ಮನೆಗೆ ಹಿಂತಿರುಗಿದ್ದರು. ನಿನ್ನೆಯೂ ಕೂಡ ಮತ್ತೆ ತಾಯಿಯ ಮನೆಗೆ ತೆರಳುವುದರಲ್ಲಿದ್ದರು. ಬಸ್ ಮುಷ್ಕರವಿದ್ದ ಕಾರಣ ಹೋಗಿರಲಿಲ್ಲ. ಅಷ್ಟರಲ್ಲಿಯೇ ಈ ದುರಂತ ಸಂಭವಿಸಿದೆ. ಪತಿ ದೇವೇಂದ್ರ ಮದ್ಯವೆಸನಿಯಾಗಿದ್ದು, ತಾನು ಹೊಸತಾಗಿ ಆರಂಭಿಸುವ ವ್ಯವಹಾರದ ಹಣ ಕೇಳಿ ದಿನವೂ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು ಅಲ್ಲದೇ ನಿನ್ನೆ (ಎ.30) ರಾತ್ರಿ ಮಗನನ್ನು ಶಾಲೆಗೆ ಸೇರಿಸುವ ಸಂಬಂಧ ಗಂಡ ಹೆಂಡತಿಯ ನಡುವೆ ಜಗಳವಾಗಿತ್ತು ಸ್ಥಳಿಯರು ಆರೋಪಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com