ಇನೋವಾ ಡಿಕ್ಕಿ: ಬೈಕ್ ಸವಾರನ ಸಾವು

ಬೈಂದೂರು: ಇನೋವಾ ಗಾಡಿಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರು ಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಮಹದೇವ ಖಾರ್ವಿ (25) ಸ್ಥಳದಲ್ಲೇ ಮೃತಪಟ್ಟ ಘಟನೆ ಮರವಂತೆ ಸಮೀಪದ ನಾವುಂದದಲ್ಲಿ ವರದಿಯಾಗಿದೆ.

ಫಟನೆಯ ವಿವರ
 ಮಂಗಳೂರಿನಿಂದ ಭಟ್ಕಳ ಕಡೆದ ಸಾಗುತ್ತಿದ್ದ ಇನ್ನೊವಾ ವಾಹನವು ಓವರ್ ಟೇಕ್ ಮಾಡುತ್ತಿರುವಾಗ ಎದುರು ಬದಿಯಿಂದ ಬಂದ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿತ್ತು. ಹೊಡೆತದಿಂದಾಗಿ ಬೈಕ್ ಸವಾರ ಮಹದೇವ ಖಾರ್ವಿಯ ತಲೆಯ ಹಾಗೂ ಇತರ ಭಾಗಗಳಿಗೆ ಬಲವಾದ ಏಟು ಬಿದ್ದುದರಿಂದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕೊಡೇರಿಯ ಮುರ್ಡೇಶ್ವರ ಮನೆ ನಾಗ ಖಾರ್ವಿ ಅವರ ಪುತ್ರರಾದ ಮಹದೇವ ಮೀನುಗಾರಿಕೆಯನ್ನು ತನ್ನ ಕಸುಬನ್ನಾಗಿಸಿಕೊಂಡಿದ್ದರು. ರಾತ್ರಿ ವೇಳೆಯಲ್ಲಿ ಕೆಲಸಕ್ಕಾಗಿ ಕೊಡೇರಿಯಿಂದ ಗಂಗೊಳ್ಳಿ ಬಂದರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಪೊಲೀಸರ ವಿರುದ್ಧ ಆಕ್ರೋಶ
ಅಪಘಾತ ಸಂಭವಿಸಿ ಬಳಿಕ ತಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಆದರೆ ಕೊಲ್ಲೂರಿನಲ್ಲಿ ಬಂದೋವಸ್ತಿನಲ್ಲಿದ್ದರಿಂದ ಘಟನಾ ಸ್ಥಳಕ್ಕೆ ಆಗಮಿಸುವುದು ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 
ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನೋವಾ ಚಾಲಕನನ್ನು ಬಂಧಿಸಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com