ಕುಂದಾಪುರ: ತಾಲೂಕಿನ ಕೋಟೇಶ್ವರ ಗೋಪಾಡಿಯ ಗರ್ಭಿಣಿ ಮಹಿಳೆಯನ್ನು ಅತ್ಯಾಚಾರಗೈದು, ಕೊಲೆಗೈದ ಆರೋಪದಲ್ಲಿ ಬಂಧಿತನಾಗಿ ಹಿರಿಯಡಕ ಜಿಲ್ಲಾ ಸಬ್ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಗೋಪಾಡಿಯ ಪ್ರಶಾಂತ ಮೊಗವೀರನಿಗೆ ಸಹಖೈದಿಗಳಲ್ಲೊಬ್ಬ ಹಲ್ಲೆ ನಡೆಸಿದ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಾಗೃಹದ ಬ್ಯಾರಕ್ ನಂ. 1ರಲ್ಲಿ ಎ. 14ರ ಬೆಳಗ್ಗೆ 8.30ಕ್ಕೆ ಸಹಖೈದಿಯೊಬ್ಬ ಪ್ರಶಾಂತನ ಬಲಗೈ ಬೆರಳುಗಳನ್ನು ತಿರುಚಿ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದ. ಅದೇ ದಿನ ಅಪರಾಹ್ನ 3.30ಕ್ಕೆ ತಲೆಯನ್ನು ಗಟ್ಟಿಯಾಗಿ ಹಿಡಿದು ಗೋಡೆಗೆ ಜಜ್ಜಿದ್ದಾನೆ. ವಿಷಯ ತಿಳಿದ ಜೈಲಿನ ಸಿಬಂದಿಗಳು ಹಲ್ಲೆಗೊಳಗಾದ ಆರೋಪಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.