ಬೈಂದೂರು: ಕಿರಿಮಂಜೇಶ್ವರ ಗ್ರಾಮದ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಲೆಟ್ ಟ್ಯಾಂಕರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂದಿದ್ದ ಮಹಿಳೆಗೆ ಗಂಭೀರ ಗಾಯವಾಗಿ ಮೃತಪಟ್ಟ ಘಟನೆ ನಡೆದಿದೆ.
ಬೆಳಿಗ್ಗೆ ಬೈಂದೂರಿನಿಂದ ಕುಂದಾಪುರ ಕಡೆಗೆ ಬೈಕಿನಲ್ಲಿ ಗಂಗಾನಾಡಿನ ಗಣಪತಿ ಎಂಬುವವರು ತನ್ನ ತಾಯಿಯನ್ನು ಕುರಿಸಿಕೊಂಡು ಹೋಗುತ್ತಿರುವಾಗ, ನಾಗೂರಿನ ಸಮೀಪ ಹಿಂದಿನಿಂದ ಓವರ್ಟೇಕ್ ಮಾಡಿಕೊಂಡು ಬಂದ ಬುಲೆಟ್ ಟ್ಯಾಂಕರ್ ಒಮ್ಮೆಲೆ ಎಡಬದಿಗೆ ಸರಿದ ಪರಿಣಾಮ ಟ್ಯಾಂಕರ್ ನ ಹಿಂಬಾಗ ಬೈಕಿಗೆ ತಾಕಿ ತಾಯಿ ಮಗ ಬೈಕ್ ಸಮೇತರಾಗಿ ರಸ್ತೆಗೆ ಬಿದ್ದಿದ್ದರು. ಗಣಪತಿ ಎಂಬುವವರಿಗೆ ತರಚಿದ ಗಾಯಗಳಾದರೇ, ಅವರ ತಾಯಿ ಕಾವೇರಿಗೆ ತಲೆಗೆ ಏಟು ಬಿದ್ದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.