ಗೇರುಬೀಜ ಕಳ್ಳರ ಬಂಧನ

ಬೈಂದೂರು: ಗೋಳಿಹೊಳೆ ಗ್ರಾಮದ ಅರೆಶಿರೂರು ಎಂಬಲ್ಲಿ  ಎಪ್ರಿಲ್ 29ರಂದು ಕೆಸಿಡಿಸಿ ಯ ಗೇರು ಪ್ಲಾಂಟೇಶನಲ್ಲಿ ಗೇರು ಬೀಜಗಳನ್ನು ತುಂಬಿಸಿಟ್ಟ ಚೀಲಗಳನ್ನು ಕಳವುಗೈದ 6 ಮಂದಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಉಡುಪಿಯ ಡಿಸಿಐಬಿ ಪೊಲೀಸ್ ತಂಡ ಯಶಸ್ವಿಯಾಗಿದೆ. 

ದೂರಿನಾದಾರದಲ್ಲಿ ಪ್ರಕರಣದ ಸುಳಿವು ಹಿಡಿದು ಹೊರಟ ಪೊಲೀಸರ ತಂಡಕ್ಕೆ ಸಿಕ್ಕಿಬಿದ್ದ ಭಟ್ಕಳ ಲಕ್ಷಣ ಮರಾಠಿ ಹಾಗೂ ಲಿಂಗು ಮರಾಠಿಯನ್ನು ವಿಚಾರಣೆ ನಡೆಸಿದಾಗ ಆರೋಪಿಗಳು ಗೇರುಬೀಜವನ್ನು ಕದ್ದಿರುವುದನ್ನು ಒಪ್ಪಿಕೊಂಡಿದ್ದಾರೆ. ಕಳ್ಳತನಕ್ಕೆ ಸಹಕರಿಸಿದ ವೆಂಕ, ಮೋಹನ, ದೇವು, ದಯಾನಂದ ಎಂಬುವವರನ್ನೂ ಬಂದಿಸಲಾಗಿದೆ. ಆರೋಪಿಗಳಿಂದ ಸುಮಾರು 25000ರೂ ಮೌಲ್ಯದ 5ಗೋಣಿಚಿಲಗಳಲ್ಲಿ ತುಂಬಿದ ಗೇರುಬೀಜ ಹಾಗೂ ಸಾಗಾಟಕ್ಕೆ ಬಳಸಿದ ಓಮ್ನಿಯನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಬೈಂದೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಕಾರ್ಯಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಟಿ. ಆರ್. ಜೈಶಂಕರ್, ಬೈಂದೂರು ಪೊಲೀಸ್ ಉಪನಿರೀಕ್ಷಕ ಸಂತೋಷ ಕಾಯ್ಕಿಣಿ, ಎ.ಎಸ್.ಐ ರೋಸಾರಿಯೋ ಡಿಸೋಜ, ಸಿಬ್ಬಂದಿಗಳಾದ ಸಂತೋಷ ನಿಟ್ಟೂರು, ಸಂತೋಷ ಕುಂದರ್, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ಸುರೇಶ, ರಾಘವೇಂದ್ರ ಉಪ್ಪುಂದ, ಪ್ರವೀಣ, ಥಾಮ್ಸನ್, ಚಾಲಕ  ಚಂದ್ರಶೇಖರ್‌ ಪಾಲ್ಗೊಂಡಿರುತ್ತಾರೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com