ಸಂಬಂಧಿಗಳೇ ಮದುವೆ ಮನೆಗೆ ಬೆಂಕಿ ಇಟ್ಟರು!

ಬೈಂದೂರು: ಇಲ್ಲಿನ ತಗ್ಗರ್ಸೆ ಗ್ರಾಮದ ನೆಲ್ಯಾಡಿ ಅರಳಿಕಟ್ಟೆ ಮನೆಯ ಸುಶೀಲಾ ಮತ್ತು ನಾಗಮ್ಮ ಶೆಡ್ತಿ ಎಂಬುವವರ ಹಂಚಿನ ಮನೆಗೆ ಕುಟುಂಬಿಕರು ಮದುವೆಗೆ ತೆರಳಿದ ಸಂದರ್ಭ ಬೆಂಕಿ ಹಚ್ಚಿದ್ದ ಆರೋಪಿಗಳು, ಮದುವೆ ಸಂಭ್ರಮದಲ್ಲಿದ್ದ ಮನೆಮಂದಿಗೆ ಬಿಸಿ ಶಾಕ್ ನೀಡಿದ ಘಟನೆ ವರದಿಯಾಗಿದೆ. 

ಘಟನೆಯ ವಿವರ:
ತಗ್ಗರ್ಸೆಯ ನೆಲ್ಯಾಡಿ ಅರಳಿಕಟ್ಟೆ ಮನೆ ಸುಶೀಲಾ ಎಂಬುವವರ ಮಗನಿಗೆ ಮದವೆ ನಿಗದಿಯಾಗಿತ್ತು. ಮನೆಯವರೆಲ್ಲರೂ ಮದುವೆ ಸಮಾರಂಭಕ್ಕೆ ಕಟ್ ಬೆಲ್ತೂರಿನ ರಾಮಲಕ್ಷ್ಮಣ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಸಂದರ್ಭವನ್ನು ನೋಡಿಕೊಂಡು ಕುಟುಂಬದ ಹತ್ತಿರದ ಸಂಬಂಧಿಕರಾದ ರಾಘವೇಂದ್ರ ಹಾಗೂ ರಾಜೇಶ ಎಂಬುವವರು ಮಧ್ಯಾಹ್ನ 12ಗಂಟೆಯ ಸುಮಾರಿಗೆ ಸುಶೀಲಾ ಅವರ ಮನೆ ಕಾಯಲು ಬಂದಿದ್ದ ಕಾವೇರಿ ಎಂಬುವವರನ್ನು ಬೆದರಿಸಿ ಬಾಗಿಲು ಮುರಿದು ಒಳನುಗ್ಗಿ ಜಗಲಿಯಲ್ಲಿದ್ದ ಪಿರೋಪಕರಣಗಳನ್ನು ಪುಡಿಗೈದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಪಕ್ಕದ ಮನೆಯವರಾದ ಆರೋಪಿಗಳ ಕುಟುಂಬದ ನಡುವೆ ರಸ್ತೆ ವಿಚಾರಕ್ಕೆ ತಕರಾರಿತ್ತು ಎನ್ನಲಾಗಿದ್ದು ಅದೇ ವಿಷಯವನ್ನಿಟ್ಟುಕೊಂಡು ಮನೆಗೆ ಬೆಂಕಿ ಹಚ್ಚಿದ ಬಗ್ಗೆ ತಿಳಿದುಬಂದಿದೆ.

ಬೆಂಕಿ ಮನೆ ಜಗಲಿಯನ್ನು ಆವರಿಸಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಶಕ್ಕೆ ಪೋನಾಯಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ ಸುಮಾರು 3ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದ್ದವು. ಪ್ರಕರಣದ ಬೆನ್ನತ್ತಿದ ಬೈಂದೂರು ಪೊಲೀಸರು ಶೀಘ್ರ ಆರೋಪಿಗಳಾದ  ರಾಘವೇಂದ್ರ, ರಾಜೇಶ್ ಹಾಗೂ ದುಶ್ಕೃತ್ಯಕ್ಕೆ ಕುಮ್ಮಕ್ಕು ನೀಡಿದ ರಂಗಯ್ಯ ಬಾರ್ ಒಂದರಲ್ಲಿ ಮಧ್ಯ ಸೇವಿಸುತ್ತಿದ್ದ ವೇಳೆಗೆ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com