ಅಕ್ರಮ ಪಿಸ್ತೂಲು ಮಾರಾಟಗಾರರ ಬಂಧನ

ಉಡುಪಿ: ಇಬ್ಬರು ಖದೀಮರು ಪಿಸ್ತೂಲು ಮಾರಾಟಕ್ಕಾಗಿ ಗ್ರಾಮೀಣ ಪ್ರದೇಶವಾದ  ಬ್ರಹ್ಮಾವರ ಠಾಣೆ ವ್ಯಾಪ್ತಿಯ ಯಡ್ತಾಡಿ ಎಂಬಲ್ಲಿ ತಮ್ಮ ಹಂಕ್ ಬೈಕಿನಲ್ಲಿ ತಿರುಗುವುದರ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಉಡುಪಿ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. 

ಕೋಟೇಶ್ವರ ಹಳೆಅಳಿವೆ ನಿವಾಸಿ  ಯೋಗೀಶ (29) ಹಾಗೂ ಕುಂದಾಪುರ ಫೆರಿ ರಸ್ತೆ ನಿವಾಸಿ  ಸೊಹೆಲ್ (29) ಬಂಧಿತ ಆರೋಪಿಯಾಗಿದ್ದಾರೆ. ಆರೋಪಿಗಳಿಂದ ಒಂದು ಪಿಸ್ತೂಲ್, 7 ಸಜೀವ ಗುಂಡುಗಳು (ರೌಂಡ್ಸ್), 3 ಮೊಬೈಲ್ ಫೋನ್‌, ಹೀರೊ ಹೊಂಡಾ ಹಂಕ್ ಬೈಕ್  ಸೇರಿದಂತೆ ಅಂದಾಜು 1,34,000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆ ಎಸ್ಪಿ ಕೆ.ಅಣ್ಣಾಮಲೈ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಹಾಗೂ ಉಡುಪಿ ಡಿವೈಎಸ್ಪಿ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್ ಜೈಶಂಕರ್‌ಅವರು ದಾಳಿ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ಸಂತೋಷ್ ಅಂಬಾಗಿಲು, ಸಂತೋಷ ಕುಂದರ್, ಪ್ರವೀಣ, ರಾಘವೇಂದ್ರ ಉಪ್ಪುಂದ, ಥಾಮ್ಸನ್ ಮತ್ತು ಚಂದ್ರಶೇಖರ ಮೊದಲಾದವರಿದ್ದರು.
ಆರೋಪಿಗಳನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಬ್ರಹ್ಮಾವರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com