ಕೋಣಿ: ಇಲ್ಲಿನ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ವೀಕ್ಷಣೆಗೆಂದು ಪರವೂರಿನಿಂದ ಆಗಮಿಸಿದ್ದ ಕೆಲವು ಕಿಡಿಗೇಡಿಗಳು ತಡರಾತ್ರಿ 2.30ರ ಸುಮಾರಿಗೆ ಮೈದಾನದ ಹೊರಗಡೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಸಿದ್ದ ಕಂಡುಬಂತು. ಪಂದ್ಯಾಟ ವೀಕ್ಷಿಸಲೆಂದು ಆಗಮಿಸಿದ್ದ ಅಮಾಯಕರ ಮೇಲೆ ಪೊಲೀಸರು ಇರುವಾಗಲೇ ಕೈಯೆತ್ತಿದ್ದ ಕಿಡಿಗೇಡಿಗಳು 25ಕ್ಕೂ ಹೆಚ್ಚು ಟ್ಯೂಬ್ಲೈಟ್ ಒಡೆದು ಹಾಕಿ, ಸೋಡಾಬಾಟಲಿಯನ್ನು ರಸ್ತೆಯ ಮೇಲೆ ಎಸೆದು ದಾಂಧಲೆ ನಡೆಸಿದ್ದಾರೆ. ಸೋಡಾಬಾಟಲಿ ಎಸೆತದಿಂದ ಅಲ್ಲಿದ್ದ ಮಹಿಳೆಗೆ ಗಾಯಗೊಂಡಿದ್ದಾರೆ.