
ರೈಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಯುವತಿ ರೇಮಿಯಾ ಪೌಲ್(24) ಕೇರಳಾದ ಎರ್ನಾಕುಲಂ ನಿವಾಸಿಯಾಗಿದ್ದು ತಮ್ಮ ಸಹೋದರನೊಂದಿಗೆ ಶನಿವಾರ ರಾತ್ರಿ ಲಕ್ಷದ್ವೀಪದಿಂದ ಎರ್ನಾಕುಲಂ ಕಡೆಗೆ ಪ್ರಯಾಣ ಬೆಳೆಸಿದ್ದಳು. ಅಂದಿನ ರಾತ್ರಿ 12ರ ವೇಳೆಗೆ ನಾಪತ್ತೆಯಾಗಿದ್ದಳು. ಭಯಗೊಂಡ ಸಹೋದರ ಶನೀಶ್ ಮಣಿಪಾಲ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.
ಭಾನುವಾರ ಸಂಜೆ ವೇಳೆಗೆ ಕಿರಿಮಂಜೇಶ್ವರ ಕೆಳಾಮನೆ ರೈಲ್ವೆ ಹಳಿಗೆ ಹೊಂದಿಕೊಂಡಿರುವ ಕೃಷಿಭೂಮಿಯಲ್ಲಿ ನೆಲಗಡಲೆ ಕೀಳುತ್ತಿದ್ದ ಮಹಿಳೆಯರು ಯುವತಿಯ ಶವ ಅರೆನಗ್ನ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಕೆಯ ವೇಳೆ ರೈಲಿನಲ್ಲಿ ಕಾಣೆಯಾದ ಯುವತಿಯ ಚಹರೆಯಂತಿದ್ದರಿಂದ ಆಕೆಯ ಸಹೋದರನ್ನು ಸಂಪರ್ಕಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಸಹೋದರ ಯುವತಿಯು ತನ್ನ ಸಹೋದರಿ ಎಂಬುದನ್ನು ದೃಢಪಡಿಸಿದ್ದಾರೆ.
ಪರೀಕ್ಷೆಯೊಂದರಲ್ಲಿ ಅನುತ್ತೀರ್ಣಗೊಂಡಿರುವುದರಿಂದ ಯುವತಿ ಮಾನಸಿಕವಾಗಿ ಕುಗ್ಗಿದ್ದಳು ಎನ್ನಲಾಗಿದೆ. ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಹೆಚ್ಚಿನ ತನಿಕೆ ನಡೆಸಲಾಗುತ್ತಿದೆ.