ಶಿರೂರು: ಎಚ್1 ಎನ್1 ಜ್ವರದ ಪರಿಣಾಮ ಬಿಗ್ಮಾ ಹಸೀನಾ(32) ಎಂಬ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ನಡೆದಿದೆ.
ಸೊಂಕು ತಗಲಿದ್ದ ಮಹಿಳೆಯನ್ನು ಭಟ್ಕಳ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿಗೆ ತೆರಳಿದ್ದರು. ಮಾರನೇಯ ದಿನ ಜ್ವರ ಕಡಿಮೆಯಾಗದಿದ್ದಾಗ ಮಂಗಳೂರಿನ ವೆನ್ನಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಹಸೀನಾ ನಿಧನರಾಗಿದ್ದಾರೆ. ಈಕೆಗೆ ಹೃದಯ ಸಂಬಂದಿ ತೊಂದರೆಗಳಿರುವುದು ಸಹ ಕಾಯಿಲೆ ಉಲ್ಬಣಿಸಲು ಕಾರಣವಾಗಿದೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ.
ಎಚ್1 ಎನ್1 ಜ್ವರ ಶಿರೂರಿಗೆ ವ್ಯಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ .