ಬೈಂದೂರು: ಇಲ್ಲಿನ ಹೊಸ ಬಸ್ ನಿಲ್ದಾಣದ ಸಮೀಪ ಕಾರಿನ ಮುಂಭಾಗದ ಟಯರ್ ಸಿಡಿದು ಮಗುಚಿ ಬಿದ್ದಿದ್ದು ಘಟನೆಯಲ್ಲಿ ಬಿವೇಕ್ (26) ಎಂಬುವವನು ಗಂಬೀರ ಸ್ಥಿತಿಯಲ್ಲಿದ್ದು ಕೌಶಿಕ್, ನೌಸಿಪ್, ಹುಸೈನ್, ಸೂರ್ಯ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ 9:30ರ ಸುಮಾರಿಗೆ ಗೋಕರ್ಣದಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರಿನ ಟಯರ್ ಸಿಡಿದಿದ್ದರಿಂದಾಗಿ ಈ ಅವಗಡ ಸಂಭವಿಸಿದೆ. ವೇಗವಾದಲ್ಲಿ ಕಾರಿನ ಟಯರ್ ಸಿಡಿದ ರಭಸಕ್ಕೆ ಕಾರು ಸ್ಕಿಡ್ ಆಗಿ ಮಗುಚಿ ಬಿದ್ದಿದ್ದು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದು ಅದರಲ್ಲಿ ಒಬ್ಬನಿಗೆ ಗಂಭೀರ ಗಾಯವಾಗಿತ್ತು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಮಗುಚಿದ ಕಾರನ್ನು ಮೇಲೆತ್ತಿ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯವಲ್ಲಿ ಸಹಕರಿಸಿದ್ದಾರೆ.
ಬೈಂದೂರು ಪೊಲೀಸರು ಸ್ಥಳ ಮಹಜರು ನಡೆಸಿದ್ದು ಈವರೆಗೆ ಪ್ರಕರಣ ದಾಖಲಾಗಿಲ್ಲ. ಕಾರಿನಲ್ಲಿದ್ದವರು ಮಣಿಪಾಲ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.