ಬೈಂದೂರು: ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ: ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ ಬಗ್ಗೆ ಬಿಜೂರು ರೈಲ್ವೆ ನಿಲ್ದಾಣದ ಸಿಬ್ಬಂದಿ ಉಮೇಶ್ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೂರು ರೈಲ್ವೆ ನಿಲ್ದಾಣದ ಗೇಟ್ ನಂಬ್ರ 75ರ ಕಂಚಿಕಾನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ರಮೇಶ್ ಎಂಬವರು ಅಲ್ಲಿಗೆ ಬಂದು ಇದು ಪಂಚಾಯಿತಿಗೆ ಸೇರಿದ ರಸ್ತೆಯಾಗಿದ್ದು ನೀವು 1ಗಂಟೆ, ಅರ್ಧಗಂಟೆ ಗೇಟ್ ಹಾಕಿ ಬಂದ್ ಮಾಡುತ್ತೀರಿ ಎಂದು ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಉಮೇಶ್ ದೂರಿನಲ್ಲಿ ತಿಳಿಸಿದ್ದಾರೆ.