ಬೈಂದೂರು: ಇಲ್ಲಿನ ಪಡುವರಿ ಗ್ರಾಮದ ಯುವತಿ ಅನುಸುಯಾ (28) ತನ್ನ ಮನೆಯ ಬಳಿ ಇರುವ ಪಾಳುಬಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮಡುವಾಳಹಿತ್ಲು ಮನೆಯ ಲಕ್ಷ್ಮೀ ದೇವಾಡಿಗ ಮತ್ತು ಈರ ದೇವಾಡಿಗರ ನಾಲ್ವರು ಹೆಣ್ಣುಮಕ್ಕಳಲ್ಲಿ ಮೂರನೆಯವರಾದ ಅನಸೂಯಗೆ ಒಬ್ಬ ಸಹೋದರನಿದ್ದಾನೆ ಎನ್ನಲಾಗಿದೆ.
ಎರಡು ತಿಂಗಳ ಹಿಂದಷ್ಟೇ ಅನುಸೂಯ ಅವರ ನಿಶ್ಚಿತಾರ್ಥವು ನಾಗೂರಿನ ಹುಡುಗನೊಂದಿಗೆ ನಡೆದಿತ್ತು. ಕೆಲವು ತಿಂಗಳಲ್ಲಿ ಮದುವೆ ನಡೆಯುವುದಿತ್ತು. ಅಷ್ಟರಲ್ಲಿಯೇ ಈ ಅವಾಂತರ ನಡೆದಿದೆ.
ಆಕೆಯ ಭಾವಿ ಪತಿ ನಿಶ್ಚಿತಾರ್ಥವಾದ ಬಳಿಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅದರಂತೆ ನಿನ್ನೆ ಸಂಜೆಯೂ ಬಂದು ಹೋಗಿದ್ದ. ಆತ ದಿನವೂ ಪೋನ್ ಮಾಡಿ ಆಕೆಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಲಾಗಿದೆ. ಬೈಂದೂರು ಪೊಲೀಸರು ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.