ಬೈಂದೂರು: ಉಪ್ಪುಂದಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಓವರ್ಟೇಕ್ ಮಾಡುವ ಬರದಲ್ಲಿ ಭಟ್ಕಳ ಕಡೆಯಿಂದ ಮಲ್ಪೆಗೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ರಾತ್ರಿ 7:30ರ ಸುಮಾರಿಗೆ ನಡೆದಿದೆ
ಬೈಂದೂರಿನ ಕಡೆಗೆ ತೆರಳುತ್ತಿದ್ದ ಬೈಕ್ ಸವಾರ ಮಹೇಶ್ ಟ್ಯಾಂಕರೊಂದನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿ ಭಟ್ಕಳ ಕಡೆಯಿಂದ ಮಲ್ಪೆಗೆ ಸಾಗುತ್ತಿದ್ದ ಕಾರಿನ ಎಡಭಾಗಕ್ಕೆ ಸರಿದು ಬಂದು ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಡಿಕ್ಕಿ ಹೊಡಿದ ರಭಸಕ್ಕೆ ಬೈಕ್ ಸವಾರನ ಕಾಲಿಗೆ ತೀರ್ವ ಹೊಡೆತ ಬಿದ್ದಿದೆ. ಬೈಕ್ ಹಾಗೂ ಕಾರಿನ ಎಡಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓವರ್ ಟೇಕ್ ಮಾಡುತ್ತಿದ್ದಾಗ ಬೈಕ್ ಸವಾರ ಮೊದಲು ಎದುರಾದ ಕಾರಿಗೆ ಡಿಕ್ಕಿ ಹೊಡೆದು ನಡೆಯಬಹುದಾದ ದೊಡ್ಡ ದುರಂತವನ್ನು ತಪ್ಪಿಸಿಕೊಂಡರೂ ಅದರ ಹಿಂದಿದ್ದ ಕಾರಿಗೆ ಗುದ್ದಿ ರಸ್ತೆಗುರುಳಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ. ಈವರಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.