ಕುಂದಾಪುರ: ಕಂಡ್ಲೂರಿನಿಂದ ಕೋಡಿ ಕಡೆಗೆ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಾರುತಿ ಓಮ್ನಿ ಕಾರನ್ನು ಪೊಲೀಸ್ ತಂಡ ಅಡ್ಡಗಟ್ಟಿ ಅಪಾರ ಪ್ರಮಾಣದ ಗೋಮಾಂಸ, ಚರ್ಮ, ದನದ ರುಂಡ ವಶಕ್ಕೆ ತೆಗೆದುಕೊಂಡಿದೆ.
ಪೊಲೀಸರನ್ನು ಕಂಡ ಆರೋಪಿ ಕಾರನ್ನು ಕೋಣಿ ಶಾಲೆ ರಸ್ತೆ ಕಡೆಗೆ ತಿರುಗಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬೆನ್ನಟ್ಟಿದರೂ ಸಿಗದೆ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ. ಕಾರು ತಾಲೂಕಿನ ಗುಲ್ವಾಡಿಯದ್ದು ಎಂದು ತಿಳಿದುಬಂದಿದೆ.
ಅಕ್ರಮ ಗೋಮಾಂಸ ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸಿಪಿಐ ದಿವಾಕರ್ ನೇತತ್ವದ ಪೊಲೀಸ್ ತಂಡ ಆರೋಪಿಗಳಿಗೆ ಬಲೆ ಬೀಸಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.