ಪತಿಯಿಂದ ಆತ್ಮಹತ್ಯೆಗೆ ಪ್ರಚೋದನೆ; ದೂರು

ಕೊಲ್ಲೂರು: ಯಡಮೊಗ್ಗೆ ಗ್ರಾಮದ ನಡ್‌ತುಂಡ್ ನಿವಾಸಿ ಆನಂದ ಶೆಟ್ಟಿ ಅವರು ನನ್ನ ಮಗಳು ವಿಶಾಲಳ ಪತಿ ಆಕೆಗೆ ನೀಡಿದ ಕಿರುಕುಳ, ಆತ್ಮಹತ್ಯೆಯ ಪ್ರಚೋದನೆಯಿಂದ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪೊಲೀಸರಿಗೆ ದೂರು ನೀಡಿದ್ದಾರೆ. 
      ಆನಂದ ಶೆಟ್ಟಿ ಅವರ ಮಗಳು ವಿಶಾಲಳನ್ನು ಆರು ವರ್ಷದ ಹಿಂದೆ ಕೆರಾಡಿ ಚಂದ್ರ ಶೆಟ್ಟಿ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿದೆ. ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯದಲ್ಲಿ ಚಂದ್ರ ಶೆಟ್ಟಿ ಮತ್ತು ಅವರ ಅಣ್ಣ ನರಸಿಂಹ ಶೆಟ್ಟಿ ವಿಶಾಲಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ತವರು ಮನೆಗೆ ಬಂದಾಗ ಆಕೆ ಅದನ್ನು ಹೇಳಿಕೊಂಡಿದ್ದಾಳೆ. ಗಂಡನ ಕಿರುಕುಳದಿಂದ ಬೇಸತ್ತು ವಿಷ ಸೇವಿಸಿ ಚಿಕಿತ್ಸೆಯಲ್ಲಿರುವಾಗಲೇ ಮೃತಪಟ್ಟಿದ್ದಾಳೆ. ಮೃತದೇಹವನ್ನು ಬೇಗ ಪಡೆಯುವ ಉದ್ದೇಶದಿಂದ ಆಕೆಯ ಪತಿ ಗಂಡಹೆಂಡಿರ ನಡುವೆ ಯಾವುದೇ ದ್ವೇಷವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಶವಮಹಜರು ನಡೆಸುವ ವೇಳೆ ತಹಸೀಲ್ದಾರರಲ್ಲಿ ನಿಜ ವಿಚಾರ ತಿಳಿಸಿದ ಮೇರೆಗೆ ಅವರ ನಿರ್ದೇಶನದಂತೆ ಇನ್ನೊಂದು ಮದುವೆಯ ಹುನ್ನಾರದಲ್ಲಿದ್ದ ಚಂದ್ರ ಶೆಟ್ಟಿ ಅಣ್ಣ ನರಸಿಂಹ ಶೆಟ್ಟಿಯವರೊಂದಿಗೆ ಸೇರಿಕೊಂಡು ಮಗಳು ವಿಶಾಲ ಸಾವಿಗೆ ಕಾರಣರಾಗಿದ್ದಾರೆ ಎಂದು ಆನಂದ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com