ಬ್ರಹ್ಮಾವರ: ರಾ.ಹೆ.66ರಲ್ಲಿ ಬೈಕ್ ಸ್ಕಿಡ್ ಆಗಿ ಅಧ್ಯಾಪಕಿಯೊಬ್ಬರು ಸಾವಿಗೀಡಾಗಿದ್ದಾರೆ. ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ಹಿಂದಿ ಅಧ್ಯಾಪಕಿ ಜ್ಯೋತಿ (36) ಅವರು ಮೃತಪಟ್ಟವರು. ಇಲ್ಲಿನ ಆಕಾಶವಾಣಿ ವೃತ್ತ ಸಮೀಪದ ಪೆಟ್ರೋಲ್ ಪಂಪ್ ಬಳಿ ಪತಿಯ ಜತೆ ಬೈಕ್ನಲ್ಲಿ ಸಾಸ್ತಾನ ಕಡೆ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿತು.
ಸಾಸ್ತಾನ ಗುಂಡ್ಮಿಯ ಜ್ಯೋತಿ ಪ್ರತೀ ದಿನ ಬಸ್ನಲ್ಲಿ ಪ್ರಯಾಣಿಸುತ್ತಿದ್ದು , ಸೋಮವಾರ ಅವರು ಪತಿ ನಾಗೇಂದ್ರ ಜತೆ ಬೈಕಿನಲ್ಲಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿತ್ತು. ಈ ವೇಳೆ ರಸ್ತೆಗೆ ಬಿದ್ದ ಜ್ಯೋತಿ ಅವರ ಕುತ್ತಿಗೆ ಮೇಲೆ ಹಿಂದಿನಿಂದ ಬಂದ ಲಾರಿಯ ಚಕ್ರ ಹರಿದು ದಾರುಣವಾಗಿ ಸಾವಿಗೀಡಾದರು. ಘಟನೆಯ ಸ್ಥಳಕ್ಕೆ ಬ್ರಹ್ಮಾವರ ವೃತ್ತ ನೀರಿಕ್ಷಕ ಅರುಣ್ ನಾಯಕ್, ಪಿಎಸ್ಐ ಗಿರೀಶ್ ಕುಮಾರ್ ಎಸ್. ಲಾರಿ ಚಾಲಕ ಮಾಣಿಕ್ಯರನ್ನು ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿದ್ದಾರೆ.