ಕುಂದಾಪುರ: ಶಿವಮೊಗ್ಗ ಗಲಭೆ ಪ್ರಕರಣದ ಸಂಬಂಧ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕೋಡಿಯಿಂದ ತೆರಳಿದ್ದರೆನ್ನಲಾದ ಕೋಡಿಯ ನಾಲ್ವರನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೊದಲು ನಡೆದ ಕಾರ್ಯಾಚರಣೆಯಲ್ಲಿ ಹನೀಫ್ ಎಂಬಾತನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ವೇಳೆ ಆತ ನೀಡಿದ ಮಾಹಿತಿಯಂತೆ ಕುಂದಾಪುರ ಪೊಲೀಸರ ಸಹಯೋಗದೊಂದಿಗೆ ಕೋಡಿಯ ಅರ್ಶದ್ ಅಹಮದ್, ಆಸೀಬ್, ನಿಯಾಲ್ ಮತ್ತು ಮಯ್ಯದಿ ಎಂಬವರನ್ನು ವಶಕ್ಕೆ ತೆಗೆದುಕೊಂಡು ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.