ಬೈಂದೂರು: ಯಡ್ತರೆ ಗ್ರಾಮದ ತೂದಳ್ಳಿ ಸಮೀಪದ ಮೂಗಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ 10 ತಿಂಗಳ ಹಿಂದೆ ಮಂಡ್ಯ ಮೂಲದ ಯೋಗೀಶ್ ಎಂಬಾತ ಶಿರೂರಿನ ರೆಸಾರ್ಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗ ಮೂಕ ಯುವತಿಯೊಂದಿಗೆ ಸಲುಗೆ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ ಪರಿಣಾಮ ಆಕೆ ಗಭೀರ್ಣಿಯಾಗಿದ್ದಳು. ಸ್ವಲ್ಪ ದಿನದ ಬಳಿಕ ಆತ ಕೈಕೊಟ್ಟು ಪರಾರಿಯಾಗಿ ತನ್ನ ಊರು ಮಂಡ್ಯಕ್ಕೆ ತೆರಳಿದವನು, ಅಲ್ಲಿಂದ ಹಿಂತಿರುಗಿ ಬರಲಿಲ್ಲ. ಆಕೆ ಈಗ ಎಂಟು ತಿಂಗಳು ಗರ್ಭಿಣಿಯಾಗಿದ್ದು, ವಿಷಯ ತಿಳಿದ ಆಕೆಯ ಮನೆಯವರು ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರಿನನ್ವಯ ಠಾಣಾಕಾರಿ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಬೈಂದೂರು ಪೊಲೀಸರು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಆರೋಪಿಯನ್ನು ಬಂಧಿಸಿ, ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ.