ದನ ಕಡಿದು ರುಂಡ ಬಾವಿಗೆಸೆದ ದುಷ್ಕರ್ಮಿಗಳು

ಸಿದ್ದಾಪುರ: ಮಡಾಮಕ್ಕಿ ಗ್ರಾಪಂ ವ್ಯಾಪ್ತಿಯ ಶೇಡಿಮನೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಅಬ್ದುಲ್ ಖಾದರ್ ಎಂಬವರಿಗೆ ಸೇರಿದ ಪಾಳು ಬಾವಿಯಲ್ಲಿ ಐದು ದನಗಳ ರುಂಡ, ಚರ್ಮ ಇರುವುದನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. 

ಚನ್ನಕೋಡು ನಿವಾಸಿ ಗೋವಿಂದ ಪೂಜಾರಿ ಅವರ ಎಂಟು ತಿಂಗಳ ಗಬ್ಬದ ದನ ಭಾನುವಾರ ಬೆಳಗ್ಗೆ ಮೇಯಲು ಬಿಟ್ಟಿದ್ದು ನಾಪತ್ತೆಯಾಗಿತ್ತು. ಮನೆಯವರೆಲ್ಲ ಸೋಮವಾರ ಹಗಲಿಡೀ ಹುಡುಕಾಡಿದರೂ ಸಿಗಲಿಲ್ಲ. ರಾತ್ರಿ ಸುಮಾರು 10 ಗಂಟೆ ವೇಳೆಗೆ ಹುಡುಕಾಟದ ವೇಳೆ ಶೇಡಿಮನೆ ಗ್ರಾಮದ ಸರಕಾರಿ ಶಾಲೆಯ ಸಮೀಪದ ಅಬ್ದುಲ್ ಖಾದರ್ ಅವರಿಗೆ ಸೇರಿದ ಪಾಳುಬಾವಿಯ ಬಳಿ ಕೆಲವು ಯುವಕರು ನಿಂತಿರುವುದು ಕಂಡುಬಂತು. ಅವರು ದನದ ತಲೆ ಹಾಗೂ ಇತರ ಭಾಗಗಳನ್ನು ಬಾವಿಗೆ ಎಸೆಯುತ್ತಿರುವುದನ್ನು ಕಂಡ ಗೋವಿಂದ ಪೂಜಾರಿ ಮತ್ತು ಮನೆಯವರು ಸ್ಥಳೀಯರಿಗೆ ವಿಷಯ ತಿಳಿಸಿದರು. ಮಂಗಳವಾರ ಬೆಳಗ್ಗೆ ಸ್ಥಳೀಯರು ಸೇರಿ ಬಾವಿ ಬಳಿಗೆ ಹೋದಾಗ ದನ ಕಡಿದು ಬಾವಿಗೆ ಹಾಕಿದ ಕುರುಹುಗಳು ಪತ್ತೆಯಾದವು. ಕೊಳೆತ ವಾಸನೆ ಬರುತ್ತಿತ್ತು. 

ಗೋವಿಂದ ಪೂಜಾರಿ ಅವರ ದನವನ್ನು ಕಳವು ಮಾಡಿದ ಬಗ್ಗೆ ದೂರು ದಾಖಲಿಸಿಕೊಂಡ ಅಮಾಸೆಬೈಲು ಠಾಣೆ ಪೊಲೀಸರು ಅಬ್ದುಲ್ ಖಾದರ್ ಅವರ ಮಗ ಮುದಸೀರ್ (32)ನನ್ನು ಬಂಧಿಸಿದ್ದಾರೆ. ಮುದಸೀರ್ ಕೋಳಿ ಮಾರಾಟ ಅಂಗಡಿ ನಡೆಸುತ್ತಿದ್ದು, ಕೃತ್ಯದಲ್ಲಿ ಭಾಗಿ ಎಂಬ ನೆಲೆಯಲ್ಲಿ ಬಂಧಿಸಲಾಗಿದೆ. ಮಂಗಳವಾರ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ಬಾವಿಯಲ್ಲಿದ್ದ ದನದ ಕಡಿದ ತಲೆ ಭಾಗ ಹಾಗೂ ಹಿಂದೆ ಬಾವಿಗೆ ಹಾಕಲಾದ ದನದ ಕಡಿದ ತಲೆ ಭಾಗಗಳನ್ನು ಮೇಲೆತ್ತಿದ್ದಾರೆ. ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಭೇಟಿ ನೀಡಿದ್ದಾರೆ. 

ಸುದ್ದಿ ತಿಳಿದ ತಕ್ಷಣ ಭಾರಿ ಸಂಖ್ಯೆಯಲ್ಲಿ ಸ್ಥಳಿಯರು ಸ್ಥಳಕ್ಕೆ ಜಮಾಯಿಸಿದ್ದು ಇನ್ನೂ ಹಲವು ಕಡೆ ನಡೆದ ದನ ನಾಪತ್ತೆ ಪ್ರಕರಣಗಳ ಹಿಂದೆ ಇದೇ ತಂಡದ ಕೈವಾಡವನ್ನು ಶಂಕಿಸಿದರು. ಇಲ್ಲಿ ನಿರಂತರವಾಗಿ ದನದ ಮಾಂಸ ಮಾರಾಟವಾಗುತ್ತಿದ್ದು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com