ಪ್ರಮೋದ ಖಾರ್ವಿ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು

ಕುಂದಾಪುರ: ಇಲ್ಲಿನ ಖಾರ್ವಿಕೇರಿ ಯುವಕ ಪ್ರಮೋದ ಖಾರ್ವಿ (22) ಅವರನ್ನು ಅಟ್ಟಿಸಿಕೊಂಡು ಹೋಗಿ ಹೊಳೆಗೆ ದೂಡಿ ಹಾಕಿ ಕೊಲೆ ಮಾಡಿದ ಪ್ರಕರಣದ ಅರೋಪಿಗಳಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ. 
       ಆರೋಪಿಗಳಾದ ಜೀವನ್ ಖಾರ್ವಿ, ಹರ್ಬರ್ಟ್ ಬೆರೆಟ್ಟೊ, ಜೋಸೆಫ್ ಮತ್ತು ರೋಶನ್ ಬೆರೆಟ್ಟೊ 2014, ಡಿ.13ರಂದು ಚಿಪ್ಪು ತೆಗೆಯುವ ಮತ್ತು ಮೀನುಗಾರಿಕೆ ವೃತ್ತಿಯಲ್ಲಿದ್ದ ಪ್ರಮೋದ್ ಖಾರ್ವಿಯನ್ನು ಅಟ್ಟಿಸಿಕೊಂಡು ಹೋಗಿ ಕೆನರಾ ಬಾಟ್ಲಿಂಗ್ ಕಂಪನಿ ಎದುರು ಹಲ್ಲೆ ನಡೆಸಿ ಹೊಳೆಗೆ ದೂಡಿ ಕೊಲೆಗೈದಿದ್ದರು ಎಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತನ ತಂದೆ ಗಣಪತಿ ಖಾರ್ವಿ ದೂರು ನೀಡಿದ್ದರು. ಆರೋಪಿಗಳ ಪರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com