ಮರಳು ದ‌ಕ್ಕೆಗಳಿಗೆ ದಾಳಿ: ಲಾರಿಗಳ ವಶ

ಕುಂದಾಪುರ: ಇಲ್ಲಿ ಹೇರಿಕುದ್ರುವಿನ ಮರಳುಗಾರಿಕೆಯ ದ‌ಕ್ಕೆಗಳಿಗೆ ಜಿಲ್ಲಾಧಿಕಾರಿಗಳ ಆದೇಶದನ್ವಯ ದಾಳಿ ನಡೆಸಿದ ಉಡುಪಿ ಜಿಲ್ಲಾ ಗಣಿ ವಿಜ್ಞಾನ ಇಲಾಖೆಯ ಅಧಿಕಾರಿ ಲತಾ ಕುಲಕರ್ಣಿ ಅವರು 19 ಲಾರಿಗಳನ್ನು ವಶಪಡಿಸಿಕೊಂಡು ದಂಢವಿಧಿಸಿದ್ದಾರೆ.

ಅಕ್ರಮ ಮರಳುಗಾರಿಕೆಯಿಂದ ಹೇರಿಕುದ್ರು ಪರಿಸರ ಹಾಗೂ ರಿಂಗ್‌ ರಸ್ತೆ ಸಂಪೂರ್ಣ ಹಾಳಾಗಿದ್ದು, ಲಾರಿಗಳ ಭರಾಟೆಯಿಂದ ಜನಸಾಮಾನ್ಯರು ತಿರುಗಾಡುವುದೇ ಕಷ್ಟವಾಗಿತ್ತು. ಇದರಿಂದ ನೊಂದ ಸ್ಥಳೀಯರು ಜಿಲ್ಲಾಧಿಕಾರಿಯವರಲ್ಲಿ ದೂರಿಕೊಂಡ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾರೆ.

 ಸ್ಥಳೀಯರ ಮನವಿಯ ಕೆಲವು ದಿನಗಳ ಹಿಂದೆ ಮೇರೆಗೆ ಕುಂದಾಪುರ ಸಹಾಯಕ ಕಮಿಷನರ್‌ ಚಾರುಲತಾ ಸೋಮಲ್‌  ಇದೇ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಸುಮಾರು ಏಳು ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು ಹಾಗೂ ದಂಡ ವಿಧಿಸಿದ್ದರು . ಆದರೂ ಸಹ ಈ ಪ್ರದೇಶದಲ್ಲಿ ನಿರಂತರವಾಗಿ ಈ ಮರಳು ಸಾಗಾಟ ದಂಧೆ ಮುಂದುವರಿಯುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯರು ಜಿಲ್ಲಾಧಿಕಾರಿಯವರಲ್ಲಿ ದೂರಿಕೊಂಡ ಅನ್ವಯ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com