ಕೋಟ: ಉಪ್ಲಾಡಿ ಗೋಪಾಲಕಷ್ಣ ದೇವಸ್ಥಾನದ ಬಳಿಯ ನಿವಾಸಿ ಸುಘೋಶ್ ಸಾವಿನ ಪ್ರಕರಣದ ಆರೋಪಿ ಜಯದೇವ ಅಡಿಗ ನನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಆತನನ್ನು ಶಿವಮೊಗ್ಗದ ರಿಮಾಂಡ್ ಹೋಂಗೆ ಕಳುಹಿಸುವಂತೆ ಕೋರ್ಟ್ ಸೂಚಿಸಿದೆ.
ಉಡುಪಿಯ ಬಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಜಯದೇವ ಅಡಿಗನ ಚಿಕ್ಕಪ್ಪ ಕಲ್ಯಾಣ ಕುಮಾರ್ ಅಡಿಗ ಪ್ರಕರಣದಲ್ಲಿ ಭಾಗಿಯಲ್ಲ ಎಂಬ ನೆಲೆಯಲ್ಲಿ ಅವರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.