ಮುಳ್ಳುಹಂದಿ ಬೇಟೆಗಾರರ ಬಂಧನ

ಕುಂದಾಪುರ: ಗಸ್ತಿನಲ್ಲಿದ್ದ ಕುಂದಾಪುರ ವಲಯ ಅರಣ್ಯಾಧಿಕಾರಿಗಳ ತಂಡ ತಾಲೂಕಿನ ಹರ್ಕೂರು ಮೀಸಲು ಅರಣ್ಯದಲ್ಲಿ ಮುಳ್ಳುಹಂದಿ ಬೇಟೆಗಾರರನ್ನು ಬಂಧಿಸಿದ್ದಾರೆ. ಹರ್ಕೂರು ಮೂರುಕೈ ಸಮೀಪದ ಮೀಸಲು ಅರಣ್ಯದಲ್ಲಿ ಎರಡು ಮುಳ್ಳುಹಂದಿಗಳನ್ನು ಬೇಟೆಯಾಡಿದ ಆರೋಪಿಗಳಾದ ಸಾಗರ ಮೂಲದ ವೆಂಕಟೇಶ್ (65) ಹಾಗೂ ಶೇಖರಪ್ಪ (24) ಎಂಬವರನ್ನು ಬಂಧಿಸಲಾಗಿದೆ. ಬೇಟೆಯಿಂದ ಸತ್ತ ಅಂದಾಜು ನಾಲ್ಕರ ಹರೆಯದ ಎರಡು ಮುಳ್ಳುಹಂದಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 

ಉಪವಲಯ ಅರಣ್ಯಾಧಿಕಾರಿಗಳಾದ ಉದಯ್, ದಿಲೀಪ್‌ಕುಮಾರ್, ಗುರುರಾಜ್ ಕಾವ್ರಾಡಿ, ಅರಣ್ಯರಕ್ಷಕರಾದ ಉದಯ, ಮಂಜು, ವಾಹನ ಚಾಲಕರಾದ ಸದಾಶಿವ ಮತ್ತು ರವಿಕಿರಣ್ ಕಾರ್ಯಾಚರಣೆ ನಡೆಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‌ಬಾಬಾ ರೈ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಜಿ. ಲೋಹಿತ್ ತನಿಖೆ ನಡೆಸುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com