ಈಜು ತರಬೇತಿ ವೇಳೆ ಲೈಂಗಿಕ ಕಿರುಕುಳ: ಸೆರೆ

ಬೈಂದೂರು: ಶಿರೂರು ಸಮುದ್ರದಲ್ಲಿ ಈಜು ತರಬೇತಿ ನೀಡುತ್ತಿರುವ ವೇಳೆ ಈಜು ತರಬೇತುದಾರ ವೀರೇಂದ್ರ ರಾವ್ ಎಂಬವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶಿರೂರು ಯುವತಿ ನೀಡಿದ ದೂರಿನನ್ವಯ ಬೈಂದೂರು ಪೊಲೀಸರು ಮಂಗಳ ವಾರ ಆರೋಪಿಯನ್ನು ಬಂಧಿಸಿದ್ದಾರೆ. 

ಶಿರೂರಿನ ಡ್ರೀಮ್ ಟು ಡ್ರೈವಿಂಗ್ ತರಬೇತಿ ಸಂಸ್ಥೆಯಲ್ಲಿ ಈಜು ತರಬೇತಿ ಪಡೆಯುತ್ತಿದ್ದು ಸೋಮವಾರ ಶಿರೂರು ಸಮುದ್ರದಲ್ಲಿ ಕ್ಯೂಬಾ ಪ್ಲೈಯಿಂಗ್ ತರಬೇತಿಗಾಗಿ ಟ್ಯೂಬ್ ಧರಿಸಿಕೊಂಡು ಈಜು ಕಲಿಯುತ್ತಿರುವ ವೇಳೆ ವೀರೇಂದ್ರರಾವ್ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವತಿ ದೂರು ನೀಡಿದ್ದರು. ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com