ಕೋಟ: ಉಪ್ಲಾಡಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ನಿಗೂಢವಾಗಿ ನಾಪತ್ತೆಯಾದ ಪ್ರಕರಣಕ್ಕೆ ಭಯಾನಕ ತಿರುವು ದೊರೆತಿದ್ದು, ಜಯದೇವ ಅಡಿಗ (16) ಎಂಬ ಬಾಲಕ ಸುಘೋಷ್ ಭಟ್ (10)ನನ್ನು ಕೊಲೆ ಮಾಡಿ ಬಾವಿಗೆ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಉಪ್ಲಾಡಿ ಗೋಷಾಲಕೃಷ್ಣ ದೇವಸ್ಥಾನ ಬಳಿಯ ನಿವಾಸಿ ವಿಘ್ನೇಶ್ ಭಟ್ ಅವರ ಪುತ್ರ ಸುಘೋಷ್ ಭಟ್ ಶನಿವಾರ ಮನೆಯಿಂದ ಸ್ವಲ್ಪ ದೂರದಲ್ಲಿರುವ ಗೆಳೆಯ ಜಯದೇವ ಅಡಿಗನ ಮನೆಗೆ ಹೋದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ. ಆತನ ಸೈಕಲ್ ಪತ್ತೆಯಾದ ಬಳಿಕ ಹುಡುಕಾಟ ತೀವ್ರಗೊಂಡಾಗ ಜಯದೇವನೂ ಕಣ್ಮರೆಯಾಗಿ ಕುತೂಹಲ ಸೃಷ್ಟಿಯಾಗಿತ್ತು. ಸೋಮವಾರ ಮುಂಜಾನೆ ಜಯದೇವ ಅಡಿಗ ಕೋಟ ಮೂರುಕೈಯಲ್ಲಿ ರಿಕ್ಷಾದಲ್ಲಿ ಉಪ್ಲಾಡಿ ಕಡೆಗೆ ಹೋಗುತ್ತಿದ್ದಾಗ ಸ್ಥಳೀಯ ಜಗದೀಶ ಹೆಗ್ಡೆ ಎಂಬವರು ನೋಡಿ ಪೊಲೀಸರಿಗೆ ಒಪ್ಪಿಸಿದರು. ಕೋಟ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಹೊರ ಬಿದ್ದದ್ದು ಭಯಾನಕ ಸತ್ಯ. ಸುಘೋಷ್ ಆಟವಾಡಲೆಂದು ಮನೆಗೆ ಬಂದಿದ್ದ. ತಿಂಡಿ ತಿಂದ ಬಳಿಕ ಈ ಹಿಂದೊಮ್ಮೆ ತಮಾಷೆ ಮಾಡಿದ್ದನ್ನು ನೆನಪಿಸಿ ಹಾಗೇಕೆ ಮಾಡಿದೆ ಎಂದು ದಬಾಯಿಸಿ ಹೊಡೆದೆ. ಅವನೂ ಹೊಡೆದ. ನಾನು ಜೋರಾಗಿ ಹೊಡೆದಾಗ ಆತ ಆಯತಪ್ಪಿ ಕಂಬಕ್ಕೆ ಡಿಕ್ಕಿಯಾದ. ತಲೆಯ ಬಲಭಾಗಕ್ಕೆ ಪೆಟ್ಟು ಬಿದ್ದು ಆತನ ಉಸಿರು ನಿಂತಿತ್ತು. ಭಯಗೊಂಡು ಆತನನ್ನು ಮನೆಯ ಎಡಭಾಗದ ಬಾವಿಗೆ ಎಸೆದೆ ಎಂದು ಜಯದೇವ ತಪ್ಪೊಪ್ಪಿಕೊಂಡಿದ್ದಾನೆ.
ಮೂಲತ: ಬೆಂಗಳೂರಿನವನಾದ ಜಯದೇವ ಕಳ್ಳತನ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡ ಬಳಿಕ ಚಿಕ್ಕಪ್ಪ ಕಲ್ಯಾಣ್ ಕುಮಾರ್ ಅಡಿಗರ ಮನೆಗೆ ಕಳುಹಿಸಲಾಗಿತ್ತು. ಶನಿವಾರ ಊರಿನವರೆಲ್ಲ ಸೇರಿ ಸುಘೋಶ್ನನ್ನು ಹುಡುಕಿದರೂ, ಪೊಲೀಸರು ವಿಚಾರಿಸಿದರೂ ಧೈರ್ಯಗುಂದದ ಜಯದೇವ, ಭಾನುವಾರ ಬೆಳಿಗ್ಗೆ ಟ್ಯೂಶನ್ಗೆ ಹೋಗುವ ನೆಪದಲ್ಲಿ ಮನೆ ಬಿಟ್ಟಿದ್ದ.
ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ 4ನೇ ತರಗತಿ ವಿದ್ಯಾರ್ಥಿಯಾಗಿರುವ ಸುಘೋಷ್ನ ತಂದೆ ಕೆಲವು ತಿಂಗಳ ಹಿಂದೆ ಹದಯಘಾತದಿಂದ ಮತಪಟ್ಟಿದ್ದು, ತಾಯಿ ರೇವತಿ ಅವರಿಗೆ ಅನಾರೋಗ್ಯ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ, ಬ್ರಹ್ಮಾವರ ವತ್ತ ನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಎಸ್ಐ ಕೆ.ಆರ್.ನಾಯ್ಕ, ಬ್ರಹ್ಮಾವರ ಎಸ್ಐ ಗಿರೀಶ್, ಹಿರಿಯಡಕ ಎಸ್ಐ ರಫೀಕ್, ಹಲವಾರು ಜನಪ್ರತಿನಿಗಳು, ಸಮಾಜದ ಪ್ರಮುಖರು ಭೇಟಿ ನೀಡಿದರು.