ಅಪಘಾತ : ಐವರಿಗೆ ಗಾಯ

ಕೊಲ್ಲೂರು: ಸಮೀಪ ರಾಜ್ಯ ಹೆದ್ದಾರಿಯ ಹಾಲ್ಕಲ್ ಸರ್ಕಲ್‌ನಲ್ಲಿ ಖಾಸಗಿ ಬಸ್ಸು ಮತ್ತು ಮಾರುತಿ ಓಮ್ನಿ ಡಿಕ್ಕಿಯಾಗಿ ಐವರು ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲ ಕೊಲ್ಲೂರಿನಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಪ್ರವಾಸಿಗರಾಗಿದ್ದು, ಹೆಚ್ಚಿನವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರನ್ನು ಮಣಿಪಾಲಕ್ಕೆ ಸಾಗಿಸಲಾಗಿದೆ. 

ಕೊಲ್ಲೂರು ದೇವಸ್ಥಾನಕ್ಕೆ ಬಂದ ತುಮಕೂರು ಮೂಲದ ಖಾಸಗಿ ಬಸ್ ಕೊಲ್ಲೂರಿನಿಂದ ಮುರುಡೇಶ್ವರಕ್ಕೆ ಹೋಗುತ್ತಿದ್ದಾಗ ಹಾಲ್ಕಲ್ ಸರ್ಕನಲ್ಲಿ ಓಮ್ನಿಗೆ ಡಿಕ್ಕಿ ಹೊಡೆದಿದೆ. ಓಮ್ನಿ ಕೊಲ್ಲೂರಿನಿಂದ ಸಿದ್ಧಾಪುರಕ್ಕೆ ಹೋಗಿ ಪುನಃ ಕೊಲ್ಲೂರಿಗೆ ಬರುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಓಮ್ನಿಯಲ್ಲಿದ್ದ 8 ಮಂದಿಯಲ್ಲಿ ಐವರಿಗೆ ತೀವ್ರ ಗಾಯಗಳಾಗಿದ್ದು, ಡ್ರೈವರ್ ರತ್ನಾಕರ್ ನಾಯಕ್, ಕೊಲ್ಲೂರಿನವರಾದ ಕುಸುಮ, ನಾಗರತ್ನ , ರೇಣುಕ, ಅಭಿಲಾಷ್ ತೀವ್ರಗಾಯಗಲಾಗಿದ್ದು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗಲಾದ ಜಲಜಾಕ್ಷಿ ಎಂಬರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. 

ಡಿಕ್ಕಿಯ ರಬಸಕ್ಕೆ ಓಮ್ನಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಂಬ ತುಂಡಾಗಿದೆ ಓಮ್ನಿ ಸಂಪೂರ್ಣವಾಗಿ ಜಖಂ ಆಗಿದೆ. ತಕ್ಷಣ ಆಗಮಿಸಿದ ಆಬ್ಯುಲೆನ್ ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕಾಗಮಿಸಿದ ಕೊಲ್ಲೂರು ಪೋಲಿಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com