ಗಮನ ಬೇರೆಡೆ ಹರಿಸಿ ನಗದು ಲಪಟಾಯಿಸಿದ ಚೋರ

ಕುಂದಾಪುರ: ನಗರದ ಬ್ಯಾಂಕ್‌ವೊಂದರಲ್ಲಿ ನಗದು ಪಾವತಿಗಾಗಿ ತೆಗೆದುಕೊಂಡು ಹೋದ ಗ್ರಾಹಕನು ಬ್ಯಾಂಕಿನ ನಗದು ವಿಭಾಗದ ಮುಂದೆ ಹಣ ಕಟ್ಟಲು ಮುಂದಾದ ಸಮಯದಲ್ಲಿ ಆತನ ಗಮನವನ್ನು ಬೇರೆಡೆ ಹರಿಸಿ ಸುಮಾರು 2 ಲಕ್ಷ ರೂ.ಯನ್ನು ಲಪಾಟಿಸಿದ ಘಟನೆ ಸಿನೀಮಿಯ ಮಾದರಿಯಲ್ಲಿ ಬೆಳಗ್ಗೆ ಸಂಭವಿಸಿದೆ.

ಕುಂದಾಪುರದ ರವಿ ಖಾರ್ವಿ ಎನ್ನುವವರು ಬಸ್ರೂರು ಪೆಟ್ರೋಲ್‌ ಬಂಕ್‌ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಂಕ್‌ನ ನಗದನ್ನು ಬ್ಯಾಂಕ್‌ ಖಾತೆಗೆ ಕಟ್ಟಲು ಬ್ಯಾಂಕಿಗೆ ಬಂದು ನಗದು ಕೌಂಟರ್‌ ಬಳಿ ನಿಂತುಕೊಂಡಿದ್ದಾಗ ಹಿಂದೆ ಇರುವ ವ್ಯಕ್ತಿ ಹತ್ತು ರೂಪಾಯಿಗಳನ್ನು ನೆಲಕ್ಕೆ ಬೀಳಿಸುವ ಮೂಲಕ ಗಮನವನ್ನು ಬೇರೆಡೆ ಹರಿಸಿ ಕ್ಯಾಶ್‌ ಕೌಂಟರ್‌ ಮೇಲಿಟ್ಟಿದ್ದ ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾನೆ.

ಬಸೂÅರಿನ ಮಹಾಲಿಂಗೇಶ್ವರ ಪೆಟ್ರೋಲ್‌ ಪಂಪ್‌ನ ರೂ.3.11ಲಕ್ಷ ರೂ. ನಗದನ್ನು ತೆಗೆದುಕೊಂಡು ಬ್ಯಾಂಕಿಗೆ ಕಟ್ಟಲು ಬಂದು ರೂ. 1.10ನ್ನು ನಗದನ್ನು ಪಾವತಿಸಿ ಇನ್ನೊಂದು ಎರಡು ಲಕ್ಷ ಸ್ಲಿಪ್‌ ಬರೆಯುತ್ತಿರುವಾಗ ಈ ಘಟನೆ ನಡೆದಿದೆ ಎಂದು ರವಿ ಅವರು ಹೇಳಿದ್ದಾರೆ. ಅಕಸ್ಮಿಕವಾಗಿ ಘಟನೆ ನಡೆದಿರುವುದರಿಂದ ಕಕ್ಕಾಬಿಕ್ಕಿಯಾಗಿರುವ ರವಿ ಸುಮಾರು ಹೊತ್ತಿನ ನಂತರ ಬ್ಯಾಂಕಿನ ಅಧಿಕಾರಿಗಳ ಬಳಿ ತಿಳಿಸಿದ್ದಾರೆ. ಇದರಿಂದಾಗಿ ಈ ಸಮಯದಲ್ಲಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಕುಂದಾಪುರ ವೃತ್ತ ನಿರೀಕ್ಷಕ ಸೇರಿದಂತೆ ಪೊಲೀಸ್‌ ಸಿಬ್ಬಂದಿಗಳು ಆಗಮಿಸಿದ್ದಾರೆ ಮತ್ತು ತನಿಖೆ ನಡೆಸಿದ್ದಾರೆ, ಬ್ಯಾಂಕ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಬ್ಯಾಂಕ್‌ ಪಾವತಿಗೆ ಬಂದಿದ್ದ ರವಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com