ಕುಂಭಾಸಿ: ಇಲ್ಲಿನ ವಿನಾಯಕ ದೇವಸ್ಥಾನದ ಸ್ವಾಗತ ಗೋಪುರ ಸಮೀಪ ರಾ. ಹೆದ್ದಾರಿಯಲ್ಲಿ ಖಾಸಗಿ ಬಸ್ಸೊಂದು ಮಹೇಂದ್ರ ಬೊಲೆರೋಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೊಲೆರೋದಲ್ಲಿದ್ದ ಕುಂದಾಪುರದ ಸಮಾಜ ಸೇವಕ ಮಂಜುನಾಥ ಯಾನೆ ಪ್ರಕಾಶ್ ಮಲ್ಯ (45) ಮೃತಪಟ್ಟಿದ್ದು, ಇತರ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಕುಂದಾಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ ಓವರ್ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಜೀಪ್ಗೆ ಡಿಕ್ಕಿ ಹೊಡೆದಿದೆ. ಕುಂದಾಪುರ ವೆಂಕಟರಮಣ ದೇವ ಎಜ್ಯುಕೇಶನಲ್ ಟ್ರಸ್ಟಿನ ಟ್ರಸ್ಟಿಯೂ ಆಗಿರುವ ಮಂಜುನಾಥ ಮಲ್ಯ(45) ಗಂಭೀರ ಗಾಯಗೊಂಡಿದ್ದು ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸು ನೀಗಿದರು. ಜೀಪು ಚಾಲಕ ವಂಡ್ಸೆ ಚಂದ್ರ ಪೂಜಾರಿ(38) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬಸ್ ಪ್ರಯಾಣಿಕರಾದ ಕಾಳಪ್ಪ ಕಾಸನಗೊಂದು ಕೋಟ(80), ಮಹಮದ್ ಗೌಸ್ ಮತ್ತು ಸಾಯಿರಾಭಾನು ದಂಪತಿ ಕೂಡಾ ಗಾಯಗೊಂಡಿದ್ದಾರೆ.