ಬೈಂದೂರು: ಮೊದಲ ಪತ್ನಿ ಮತ್ತು ಆಕೆಯ ಮಗ, ಗಂಡನನ್ನು ಅಪಹರಿಸಿರುವುದಾಗಿ ಬೈಂದೂರಿನ ಜಹೀದಾ ಗುರುವಾರ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ಖಲೀಲ್ ನೂರ್ ಮಹಮದ್ 16 ವರ್ಷದ ಹಿಂದೆ ಬೆಂಗಳೂರಿನ ಶಹೀದಾ ಪರ್ವಿನ್ ಅವರೊಂದಿಗೆ ವಿವಾಹವಾಗಿದ್ದು ಗಂಡು ಮಗು ಜನಿಸಿತ್ತು. 6 ವರ್ಷದ ಹಿಂದೆ ಪರಸ್ಪರ ದೂರವಾಗಿದ್ದರು. ಡಿ.11ರಂದು ವಿಚ್ಚೇದಿತ ಪತ್ನಿ ಮತ್ತು ಮಗ ಬೈಂದೂರು ಪಡುವರಿ ಎಚ್ಎಂಎಂಎಸ್ ಶಾಲೆ ಬಳಿ ನಿಂತಿದ್ದ ಗಂಡನನ್ನು ಅವರ ಮೊದಲ ಪತ್ನಿ ಮತ್ತು ಮಗ ಇತರೆ ನಾಲ್ವರು ನೀಲಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ಖಲೀಲ್ ಅವರ ಎರಡನೆ ಪತ್ನಿ ಜಹೀದಾ ದೂರಿನಲ್ಲಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.