ಕರಿಮಣಿ ಸರ ಅಪಹರಣ: ದೂರು

ಬೈಂದೂರು: ಇಲ್ಲಿನ  ಸೋಮೇಶ್ವರ ದೇವಸ್ಥಾನದ ಬಳಿಯ ಮನೆಯೊಂದಕ್ಕೆ ಕೆಲಸಕ್ಕೆ ತೆರಳುತ್ತಿದ್ದ ತನಗೆ ಪರಿಚಯದ ವಾಸು ಮರಾಠಿ ಎಂಬುವವನು ಬೆದರಿಕೆ ಹಾಕಿ ಬಲವಂತದಿಂದ ಕರಿಮಣಿಯನ್ನು ಅಪಹರಿಸಿದ್ದಾನೆ ಎಂದು ಯಳಜಿತ್‌ ಗ್ರಾಮದ ಮಾಳ್ಳಿ ನಿವಾಸಿ ಚಿಕ್ಕಮ್ಮ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೆಲಸಕ್ಕೆಂದು ಬೈಂದೂರಿನಿಂದ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಂದೂರು ಪೇಟೆಯ ಬಳಿ ವಾಸು ಮರಾಠಿ ಸಿಕ್ಕಿ ತನಗೂ ಕೂಡಾ ಸೊಮೇಶ್ವರ ದೇವಸ್ಥಾನ ಬಳಿ ಹೋಗಲು ಇದೆ ಎಂದು ತಿಳಿಸಿ ರಿûಾದಲ್ಲಿ ಕರೆದುಕೊಂಡು ಹೋಗಿದ್ದನು. ನಂತರ ಒತ್ತಿನೆಣೆ ಅರಣ್ಯ ಇಲಾಖೆಯ ಗೆಸ್ಟ್‌ ಹೌಸ್‌ ಬಳಿ ರಿಕ್ಷಾವನ್ನು ನಿಲ್ಲಿಸಿದ ಆರೋಪಿಯು ತನ್ನ ಬಳಿ ಖರ್ಚಿಗೆ ಹಣವಿಲ್ಲ ನಿನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕೊಡು ಇಲ್ಲದಿದ್ದರೆ ಕೊಲೆ ಮಾಡುವುದದಾಗಿ ಬೆದರಿಕೆ ಹಾಕಿರುತ್ತಾನೆ.

ಈ ಸಂದರ್ಭದಲ್ಲಿ ಹೆದರಿ ಕುತ್ತಿಗೆಯಲ್ಲಿದ್ದ ಸುಮಾರು 26 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದುಕೊಟ್ಟಿರುವುದಾಗಿ ಚಿಕ್ಕಮ್ಮ ದೂರಿನಲ್ಲಿ ತಿಳಿಸಿರುತ್ತಾಳೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com