ಬೈಂದೂರು: ಇಲ್ಲಿನ ಎಚ್.ಎಂ.ಎಂ.ಎಸ್ ಶಾಲಾ ವಾಹನ ಬೆಳಿಗ್ಗೆ 8.30ರ ಹೊತ್ತಿಗೆ ಮಕ್ಕಳನ್ನುಶಾಲೆಗೆ ಕರೆದೊಯ್ಯತ್ತಿದ್ದ ವೇಳೆ ಒತ್ತಿನೆಣೆ ತಿರುವಿನಲ್ಲಿ ಮಗುಚಿ ಬಿದ್ದು 3 ಮಕ್ಕಳು ಗಂಭೀರ ಹಾಗೂ 25ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ.
ಗಂಭೀರ ಗಾಯಗೊಂಡಿದ್ದ ಮಕ್ಕಳಾದ ವಿದಾತ್, ಶಾರುಖ್, ಅಫಾನ್ ಇವರನ್ನು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.