ಸುಳ್ಳು ಕ್ರಯಪತ್ರ ಸೃಷ್ಟಿ: ದೂರು ದಾಖಲು

ಕುಂದಾಪುರ: ಕಂದಾವರ ಗ್ರಾಮದಲ್ಲಿ ಸ್ಥಿರಾಸ್ತಿಯೊಂದರ ಸುಳ್ಳು ಕ್ರಯಪತ್ರ ಸಷ್ಟಿಸಿ ಆಸ್ತಿ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ನ್ಯಾಯಾಲಯದ ಆದೇಶದಂತೆ 6 ಮಂದಿಯ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ಪಿಡಬ್ಲೂಡಿ ಇಲಾಖೆಯ ಪ್ರವಾಸಿ ಮಂದಿರ ಸಮೀಪದ ನಿವಾಸಿ ಸುಧಾಕರ ಶೆಟ್ಟಿ ಈ ಬಗ್ಗೆ ದೂರು ನೀಡಿದ್ದಾರೆ. 

ತಾಲೂಕಿನ ಕಂದಾವರ ಗ್ರಾಮದಲ್ಲಿ ಸಹೋದರಿ ದಿ.ವತ್ಸಲಾ ಬಿ.ಶೆಡ್ತಿಯವರ ಪುತ್ರಿ ಗೀತಾ ಆರ್.ಶೆಟ್ಟಿಯವರ ಹೆಸರಿನಲ್ಲಿ ಸ್ಥಿರಾಸ್ತಿ ಇದೆ. ಅವರು ಕೆನಡಾದಲ್ಲಿ ವೈದ್ಯಕೀಯ ಸೇವೆಯಲ್ಲಿದ್ದಾರೆ. ಅವರಿಗೆ ಮೈತಿಲಾ ಮತ್ತು ಅಕ್ಷಯ್ ಹೆಸರಿನ ಮಕ್ಕಳಿದ್ದಾರೆ. ಸ್ಥಿರಾಸ್ತಿಯನ್ನು ಈವರೆಗೂ ಮಾರಾಟ ಮಾಡಿಲ್ಲ. ಸೆಪ್ಟಂಬರ್ ತಿಂಗಳಲ್ಲಿ ಈ ಆಸ್ತಿಯ ಕಂದಾಯ ದಾಖಲೆ ಪಡೆದುಕೊಂಡ ಸಂದರ್ಭದಲ್ಲಿ ಈ ಆಸ್ತಿ ಚಂದ್ರ ಆಚಾರ್ಯ ಅವರಿಗೆ ಮಾರಾಟ ಆಗಿದೆ ಎಂದು ತೋರಿಸುವ ದಸ್ತಾವೇಜು ಉಪನೊಂದಣಾಧಿಕಾರಿ ಕಚೇರಿಯಲ್ಲಿ ದಾಖಲಾಗಿತ್ತು. ದಸ್ತಾವೇಜು ದಾಖಲೆಯಲ್ಲಿ ಗೀತಾ ಆರ್.ಶೆಟ್ಟಿಯವರಿಗೆ ಪುತ್ರಿ ಸಂಧ್ಯಾ ಶೆಟ್ಟಿ ಮತ್ತು ಮಗ ರವಿರಾಮ ಶೆಟ್ಟಿ ಎಂಬವರು ಮಕ್ಕಳು ಎಂದು 2011, ಜೂ.3ರಂದು ಬೆಂಗಳೂರಿನ ನೋಟರಿ ಸಯ್ಯದ್ ಅಬ್ದುಲ್ ಖಾಜಿಯವರ ಮುಂದೆ ಜನರಲ್ ಪವರ್ ಆಫ್ ಆಟರ್ನಿ ಬರೆದುಕೊಟ್ಟು ಆಸ್ತಿ ಮಾರಾಟಕ್ಕೆ ಅಧಿಕಾರ ಪಡೆದುಕೊಂಡಿದ್ದಾರೆ. ವಾಸ್ತವವಾಗಿ ಗೀತಾ ಆರ್.ಶೆಟ್ಟಿ 2011, ಜೂ.3ರಂದು ಕೆನಡಾದಲ್ಲಿಯೇ ಇದ್ದರು. ಅವರಿಗೆ ಸಂಧ್ಯಾ ಹೆಸರಿನ ಮಗಳು, ರವಿರಾಮ ಶೆಟ್ಟಿ ಹೆಸರಿನ ಮಗ ಇಲ್ಲ. ಜನರಲ್ ಪವರ್ ಆಫ್ ಅಟರ್ನಿ ಪಡೆಯುವ ಸಂದರ್ಭ ನೀಡಲಾದ ಭಾವಚಿತ್ರ ಗೀತಾ ಆರ್.ಶೆಟ್ಟಿಯವರದ್ದಾಗಿರಲಿಲ್ಲ. ವಿಷಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಚಂದ್ರ ಆಚಾರ್ಯ ಕಾಡಿನಕೊಂಡ ಎಂಬವರು ಪವರ್ ಆಫ್ ಅಟರ್ನಿ ಬಳಸಿಕೊಂಡು ಕ್ರಯ ದಸ್ತಾವೇಜು ರದ್ಧತಿಗೆ ಅರ್ಜಿ ಸಲ್ಲಿಸಿ ರದ್ದುಗೊಳಿಸಿದ್ದಾರೆ. ಈ ಕ್ರಯಪತ್ರಕ್ಕೆ ಉದಯ ಆಚಾರ್ಯ ಮತ್ತು ಸು ಧಾಕರ ಎಂಬವರು ಸಾಕ್ಷಿಯಾಗಿ ಸಹಿ ಮಾಡಿದ್ದಾರೆ. ಪ್ರೇಮಾ ಮತ್ತು ದಿನೇಶ್ ಎಂಬವರು ರದ್ಧತಿ ಪತ್ರಕ್ಕೆ ಸಾಕ್ಷಿ ನೀಡಿದ್ದಾರೆ. ಸುಳ್ಳು ಕ್ರಯಪತ್ರ ಸಷ್ಟಿ ಕತ್ಯದಲ್ಲಿ ಚಂದ್ರ ಆಚಾರ್ಯ, ರಮೇಶ್ ಬಂಗೇರ, ಉದಯ ಆಚಾರ್ಯ, ಸುಧಾಕರ, ಪ್ರೇಮಾ, ದಿನೇಶ್ ಮತ್ತು ಇತರರು ಭಾಗಿಯಾಗಿರುವುದಾಗಿ ಸುಧಾಕರ ಶೆಟ್ಟಿ ಕುಂದಾಪುರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು ದೂರು ಸ್ವೀಕರಿಸಿದ ನ್ಯಾಯಾಲಯ ಪ್ರಕರಣದ ತನಿಖೆಗೆ ಆದೇಶಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com