ಮನೆಗೆ ನುಗ್ಗಿ ಕಳವು ಬೆಳ್ಳಿ ಸಾಮಗ್ರಿ ಕಳವು


ಕುಂದಾಪುರ : ಕೋಟೇಶ್ವರದ ಚಿಕ್ಕಮ್ಮ ದೆ„ವದ ಮನೆ ಸಮೀಪದ ನಿವಾಸಿ ಲಕ್ಷ್ಮಣರಾವ್‌ ಅವರ ಮನೆಗೆ ನುಗ್ಗಿದ ಕಳ್ಳರು ಮನೆಯ ಎಲ್ಲಾ ವಸ್ತುಗಳನ್ನು ಜಾಲಾಡಿ , ಚೆಲ್ಲಾಪಿಲ್ಲಿಯಾಗಿಸಿ ದೇವರ ಕೋಣೆಯಲ್ಲಿದ್ದ ಬೆಳ್ಳಿಯ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಲಕ್ಷ್ಮಣ ರಾವ್‌ ಅವರು ಕೋಟೇಶ್ವರದಲ್ಲಿ ಮೊಬೆ„ಲ್‌ ಅಂಗಡಿಯನ್ನು ನಡೆಸಿಕೊಂಡಿರುತ್ತಿದ್ದರು. ತಂದೆ ಮತ್ತು ಮಗ ಪ್ರತಿನಿತ್ಯ ತಡವಾಗಿ ಮನೆಗೆ ಬರುತ್ತಿದ್ದು ಮನೆಯಲ್ಲಿ ಅವರ ಪತ್ನಿ ಇರುತ್ತಿದ್ದರು. ಆದರೆ ಅಂದು ಅವರ ಪತ್ನಿ ಕಾಳಾವರ ಷಷ್ಟಿಗೆ ಹೋಗಿದ್ದರು. ಇದೇ ಸಂದರ್ಭ ನೋಡಿದ ಚೋರರು ಮನೆಯ ಹೆಬ್ಟಾಗಿಲಿನ ಬೀಗ ಒಡೆದು ಒಳನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಬ್ಬಿಣದ ಕಪಾಟಿನ ಬೀಗವನ್ನೂ ಒಡೆದು ಹಾಕಿ ಶೋಧಿಧಿಸಿದ್ದಾರೆ. ಕೊನೆಗೆ ದೇವರ ಕೋಣೆಯಲ್ಲಿಡಲಾಗಿದ್ದ ಬೆಳ್ಳಿಯ ಹರಿವಾಣ(ತಟ್ಟೆ), ಬೆಳ್ಳಿಯ 5 ಹಣತೆಗಳನ್ನು ದೋಚಿ ಪರಾರಿಯಾಗಿದ್ದಾರೆ. ರಾತ್ರಿ ಮನೆಗೆ ಬಂದಾಗ ಘಟನೆ ತಿಳಿದು ಬಂದಿರುತ್ತದೆ.

ಶಂಕಿತ ವಶಕ್ಕೆ : ಮನೆಕಳವು ಯತ್ನಕ್ಕೆ ಸಂಬಂಧಿಧಿಸಿ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅನುಮಾನಾಸ್ಪದೆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com