ಬೈಂದೂರು: ಯಡ್ತರೆ ಗ್ರಾಮದ ಕಡ್ಕೆ ಬರ್ಖಾನಮಕ್ಕಿಯ ಮಾಸ್ತಿ ಗೊಂಡ ಅವರ ಕೊಟ್ಟಿಗೆ ಮುರಿದು ಎರಡು ಕೋಣಗಳನ್ನು ಅ. 29 ರ ತಡರಾತ್ರಿ ಕಳವು ಮಾಡಲಾಗಿದ್ದು, ಆ ಕೋಣಗಳು ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಜೋಗೂರಿನ ದೇವಸ್ಥಾನದ ಬಳಿ ಪತ್ತೆಯಾಗಿವೆ. ಜೋಗೂರಿನ ದೇವಸ್ಥಾನದ ಬಳಿ ಮೇಯುತ್ತಿರುವ ಎರಡು ಕೋಣಗಳು ಕಂಡ ಸ್ಥಳೀಯರು ಅವುಗಳನ್ನು ಗುರುತಿಸಿ ಬೈಂದೂರು ಪೊಲೀಸರಿಗೆ ತಿಳಿಸಿದರು. ಅಲ್ಲಿಗೆ ಆಗಮಿಸಿದ ಪೊಲೀಸರು, ಕೋಣಗಳನ್ನು ಠಾಣೆಗೆ ಕರೆ ತಂದು, ಅವುಗಳನ್ನು ಮನೆಯವರಿಗೆ ಹಸ್ತಾಂತರಿಸಿದರು.