ಕಬಡ್ಡಿ ಪಂದ್ಯಾಟ ವೇಳೆ ಹೊಡೆದಾಟ

ಕಂಡ್ಲೂರು: ಇಲ್ಲಿ ಭಾನುವಾರ ರಾತ್ರಿ ನಡೆದ ಕಬಡ್ಡಿ ಪಂದ್ಯಾಟದ ವೇಳೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಸಿದಂತೆ ದೂರು ದಾಖಲಾಗಿದೆ. ಕಂಡ್ಲೂರು ಫ್ರೆಂಡ್ಸ್ ಮತ್ತು ಅನುಗ್ರಹ ಫ್ರೆಂಡ್ಸ್ ತಂಡದ ನಡುವೆ ಪಂದ್ಯಾಟ ನಡೆಯುತ್ತಿರುವ ವೇಳೆ ಕೊನೆಯ ರೈಡ್‌ನ ಸಂದರ್ಭ ಅನುಗ್ರಹ ಫ್ರೆಂಡ್ಸ್‌ನ ಆಟಗಾರ, ಎಬಿವಿಪಿ ಕಾರ್ಯಕರ್ತ ಸಚಿನ್(21) ಅವರ ಮೇಲೆ ಶಾಹಿದ್, ಜಫ್ರೀದ್ ಇನ್ನಿತರರು ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಬಂದ ಕಿರಣ್(31) ಹಾಗೂ ಲವ(27) ಎಂಬವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

ಪ್ರತಿಭಟನೆ: ಸೋಮವಾರ ಬಸ್ರೂರು ಶಾರದಾ ಕಾಲೇಜು ವಿದ್ಯಾರ್ಥಿಗಳು ಕಬಡ್ಡಿ ಪಂದ್ಯಾಟದ ವೇಳೆ ಅಮಾಯಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com