ಗುಂಪು ಘರ್ಷಣೆ. ಪತ್ರಕರ್ತನ ಮೇಲೆ ಹಲ್ಲೆ

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ನಿನ್ನೆ ರಾತ್ರಿ ವೇಳೆ ನಡೆದ ಗುಂಪುಘರ್ಷಣೆಯ ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆಯ ವಿವರ:
    ಗಂಗೊಳ್ಳಿಯ ಎರಡು ಸಮುದಾಯಗಳ ನಡುವೆ ವೈಯಕ್ತಿಕ ಕಾರಣದಿಂದಾಗಿ ಘರ್ಷಣೆ ನಡೆಯುದರಲ್ಲಿತ್ತು. ಇದನ್ನು ವರದಿ ಮಾಡಲು ಅಲ್ಲಿಗೆ ಪತ್ರಕರ್ತ ರಾಘವೇಂದ್ರ ಪೈ ತೆರಳಿದ್ದರು. ಇವರನ್ನು ಗಮನಿಸಿದ ಒಂದು ಸಮುದಾಯದ ಕಿಡಿಗೇಡಿಗಳು ಅವರು ಘಟನಾ ಸ್ಥಳದಿಂದ ಮರಳುತ್ತಿದ್ದಂತೆ ಬೈಕನ್ನು ಅಡ್ಡಗಟ್ಟಿ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದರಲ್ಲದೇ ಅವರ ಬೈಕನ್ನು ಹಾನಿಗೊಳಿಸಿದ್ದಾರೆ. 
    ಇದನ್ನು ಗಮನಿಸಿದ ರಾಘವೇಂದ್ರ ಪೈ ಅವರ ಪರಿಚಿತರು ಅವರ ಮೇಲೆ ಹಲ್ಲೆಯಾಗುವುದನ್ನು ತಡೆದಿದ್ದಾರೆ.  ಗಂಗೊಳ್ಳಿ ಠಾಣಾಧಿಕಾರಿ ಹಾಗೂ ಕುಂದಾಪುರ ವೃತ್ತ ನಿರೀಕ್ಷಕರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು ಗಂಗೊಳ್ಳಿ ಪರಿಸರದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ರಾಘವೇಂದ್ರ ಪೈ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :
 
© Copyright 2013-14 ಕುಂದಾಪ್ರ ಡಾಟ್ ಕಾಂ | ಅಫರಾದ-ಅಫಘಾತ ಸುದ್ದಿಗಳು All Rights Reserved.
Template Design by Herdiansyah Hamzah | Published by Kundapra Dot Com