ಗಂಗೊಳ್ಳಿ: ನಿಧಿಯನ್ನು ಹುಡುಕುವುದಕ್ಕಾಗಿ ಗಂಗೊಳ್ಳಿಯಲ್ಲಿ ಬೀಡುಬಿಟ್ಟಿದ್ದ ಮಂತ್ರವಾದಿ ಸಹಿತ ಸುಮಾರು 20 ಜನರ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳು ಸೇರಿದಂತೆ ಕುಕೃತ್ಯಕ್ಕೆ ಬಳಸಲಾದ ಮಾರುತಿ ಓಮ್ನಿ ,ಗುದ್ದಲಿ, ಹಾರೆ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ತಡರಾತ್ರಿ ಗಂಗೊಳ್ಳಿಯಲ್ಲಿ ನಡೆದಿದೆ.
ಬಂಧಿತ ಅರೋಪಿಗಳನ್ನು ಹೆಮ್ಮಾಡಿಯ ಸಂತೋಪನಗರ ನಿವಾಸಿ ಆರೀಫ್ ಹಾಗೂ ಕೋಡಿ ನಿವಾಸಿ ಶರೀಫ್ ಎಂದು ಗುರುತಿಸಲಾಗಿದೆ.
ಪರಾರಿಯಾದ ಮಂತ್ರವಾದಿ ಸಹಿತ ಇತರ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.